ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿಯ ಅತ್ಯಾಚಾರ; ಪ್ರಾಂಶುಪಾಲರ ಚಾಲಕನ ಬಂಧನ
ಹೈದರಾಬಾದ್: ಹೈದರಾಬಾದ್‌ನ ಐಷಾರಾಮಿ ಬಂಜಾರಾ ಹಿಲ್ಸ್ ಪ್ರದೇಶದ ಡಿಎವಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಲ್ಕು ವರ್ಷದ ಶಿಶುವಿಹಾರದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಗಿದೆ.
ಎರಡು ತಿಂಗಳುಗಳಿಂದ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಲಕಿ ತನ್ನ ತಾಯಿಗೆ ತಿಳಿಸಿದ ನಂತರ ಚಾಲಕನನ್ನು ಹಿಡಿದು ಥಳಿಸಲಾಗಿದೆ. ಬಾಲಕಿಯ ಹೆತ್ತವರು ಹಾಗೂ ಇತರ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆಯನ್ನು ನಡೆಸಿದರು.
ಹುಡುಗಿಯ ಪೋಷಕರು ಮಗಳ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದರು. ಬಾಲಕಿ ಅಸಾಧಾರಣವಾಗಿ ಶಾಂತವಾಗಿ, ಖಿನ್ನತೆಗೆ ಒಳಗಾಗಿದ್ದಳು ಹಾಗೂ ಅಳುತ್ತಿರುವುದು ಕಂಡುಬಂದಿದೆ. ತಾಯಿ ತನ್ನೊಂದಿಗೆ ಮಾತನಾಡಿದ ಬಾಲಕಿ ಅಂತಿಮವಾಗಿ ತನಗಾದ ಕಿರುಕುಳವನ್ನು ಹೇಳಿದೆ.
ಸೋಮವಾರ ಪ್ರಾಂಶುಪಾಲರ ಕೋಣೆಗಳ ಬಳಿ ಇರುವ ಡಿಜಿಟಲ್ ತರಗತಿ ಅಥವಾ ಲ್ಯಾಬ್‌ನಲ್ಲಿ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ವರದಿಯಾಗಿದೆ.
ಮಂಗಳವಾರ ಪೋಷಕರು ಬಾಲಕಿಯೊಂದಿಗೆ ಶಾಲೆಗೆ ಹೋದಾಗ ಬಾಲಕಿ ಚಾಲಕನ ಕಡೆಗೆ ಕೈ ತೋರಿಸಿದಳು. ನಂತರ ಪೋಷಕರು ದೂರು ದಾಖಲಿಸಿದರು ಮತ್ತು ಅದೇ ದಿನ ವ್ಯಕ್ತಿಯನ್ನು ಬಂಧಿಸಲಾಯಿತು. ಬಾಲಕಿಯನ್ನು ಕೌನ್ಸೆಲಿಂಗ್ ಕೇಂದ್ರಕ್ಕೆ ಕಳುಹಿಸಲಾಯಿತು. ಅಲ್ಲಿ ಬಾಲಕಿ ಹೆಚ್ಚಿನ ವಿವರಗಳನ್ನು ಹಂಚಿಕೊಂಡಳು ಹಾಗೂ ನಂತರ ಮನೆಗೆ ಕರೆದೊಯ್ಯಲಾಯಿತು.