ಕೋಝಿಕ್ಕೋಡ್: ಅ.20, 21ರಂದು ವಾಫಿ-ವಫಿಯ್ಯ ಕಲೋತ್ಸವ, ಸನದುದಾನ ಸಮ್ಮೇಳನ

Update: 2022-10-19 05:42 GMT

ಕೋಝಿಕ್ಕೋಡ್, ಅ.19: ಇಲ್ಲಿನ ಸ್ವಪ್ನ ನಗರಿಯಲ್ಲಿರುವ ವಾಫಿ-ವಫಿಯ್ಯ ಕಲೋತ್ಸವ ಹಾಗೂ ಸನದುದಾನ ಸಮ್ಮೇಳನವು ಅ.20, 21 ರಂದು ನಡೆಯಲಿದೆ.

'ಇಸ್ಲಾಂ: ಸರಳ, ಸುಂದರ' ಎಂಬ ಧ್ಯೇಯವಾಕ್ಯದೊಂದಿಗೆ ಜರುಗುವ ಸಮ್ಮೇಳನದಲ್ಲಿ ಕ್ಯೂ ಫಾರ್ ಟುಮೋರೋ, ಡಿಬೇಟ್, ಸೆಮಿನಾರ್, ಸನದುದಾನ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನ ನಡೆಯಲಿದೆ. ವಿವಿಧ ಸೆಶನ್‌ಗಳಲ್ಲಿ, ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಯೂನಿವರ್ಸಿಟೀಸ್ ಲೀಗ್‌ನ ಪ್ರತಿನಿಧಿಗಳು ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿನ ಪ್ರಮುಖ ವ್ಯಕ್ತಿಗಳು ಭಾಗವಹಿಸುವರು.

'ಇಸ್ಲಾಂ: ಸರಳ, ಸುಂದರ' ಎಂಬ ಪ್ರಮೇಯದೊಂದಿಗೆ ಒಗ್ಗೂಡುವ ಸಮ್ಮೇಳನದಲ್ಲಿ ಕ್ಯೂ ಫಾರ್ ಟುಮೋರೋ, ಡಿಬೇಟ್, ಸೆಮಿನಾರ್, ಸನದುದಾನ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನ ನಡೆಯಲಿದೆ.

ವಿವಿಧ ಸೆಷನ್‌ಗಳಲ್ಲಿ, ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಯೂನಿವರ್ಸಿಟೀಸ್ ಲೀಗ್‌ನ ಪ್ರತಿನಿಧಿಗಳು ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿನ ಪ್ರಮುಖ ವ್ಯಕ್ತಿಗಳು ಭಾಗಿಯಾಗುತ್ತಾರೆ.

ಸನದುದಾನ ಸಮ್ಮೇಳನದಲ್ಲಿ ಈಜಿಪ್ಟ್ ನ ವರ್ಲ್ಡ್ ಮುಸ್ಲಿಂ ಯೂನಿವರ್ಸಿಟೀಸ್ ಲೀಗ್‌ ಪ್ರಧಾನ ಕಾರ್ಯದರ್ಶಿ ಶೇಖ್ ಉಸಾಮಹ್ ಅಲ್ ಅಬ್ದ್, ವಾಫಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶೇಖ್ ಹಮ್ಝ ಯೂಸುಫ್ (ಝೈತೂನಾ, ಅಮೆರಿಕ) ಸನದು ಸ್ವೀಕರಿಸುವ ವಿದ್ವಾಂಸರಿಗೆ ವರ್ಚುವಲ್ ಸಂದೇಶ  ನೀಡಲಿದ್ದಾರೆ.

ಅಮೆರಿಕ, ಜಪಾನ್, ಸ್ವೀಡನ್, ಫ್ರಾನ್ಸ್, ಈಜಿಪ್ಟ್, ಕುವೈತ್ ಮುಂತಾದ ವಿಶ್ವಪ್ರಸಿದ್ಧ ಸಂಸ್ಥೆಗಳ ಅಕಾಡಮಿಕ್ ಚಿಂತಕರು, ಕೊಡಪ್ಪನಕ್ಕಲ್ ಸಾದತುಗಳು, ವಾಫಿ ಅರ್ಹಾಮ್ ಸದಸ್ಯರು, ಹತ್ತು ಸಾವಿರಕ್ಕಿಂತಲೂ ಹೆಚ್ಚು ವಾಫಿ-ವಫಿಯ್ಯ ವಿಧ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News