ದಿಲ್ಲಿ: ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರ
Update: 2022-10-19 11:17 IST
ಹೊಸದಿಲ್ಲಿ: ಗಾಝಿಯಾಬಾದ್‌ನಲ್ಲಿ 40 ವರ್ಷದ ಮಹಿಳೆಯನ್ನು ಐವರು ಆರೋಪಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಗೆ ಪರಿಚಯವಿರುವ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ದಿಲ್ಲಿಯ ನಿವಾಸಿ ಮಹಿಳೆ ಹುಟ್ಟುಹಬ್ಬದ ಸಂತೋಷಕೂಟದಿಂದ ಮನೆಗೆ ವಾಪಸಾಗುತ್ತಿರುವಾಗ ಅವರ ಸಹೋದರ ಬಸ್ ನಿಲ್ದಾಣದ ತನಕ ಅವರನ್ನು ಬಿಟ್ಟುಹೋಗಿದ್ದರು. ಬಸ್‌ಗಾಗಿ ಕಾಯುತ್ತಿರುವಾಗ ಒಂದು ಕಾರು ಮಹಿಳೆಯ ಬಳಿ ಬಂದು ನಿಂತಿತು. ಐವರು ಆರೋಪಿಗಳು ಮಹಿಳೆಯನ್ನು ಬಲವಂತವಾಗಿ ಅಪಹರಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ನಂತರ ದುಷ್ಕರ್ಮಿಗಳು ಮಹಿಳೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿದೆ