ಮಾರುಕಟ್ಟೆಗೆ 15 ದಶಲಕ್ಷ ಬ್ಯಾರೆಲ್ ತೈಲ ಬಿಡುಗಡೆಗೆ ಅಮೆರಿಕ ನಿರ್ಧಾರ

Update: 2022-10-19 16:39 GMT

ವಾಷಿಂಗ್ಟನ್, ಅ.19: ಅಂತಾರಾಷ್ಟ್ರೀಯ ಮಾರುಕಟ್ಟೆ(International market)ಯಲ್ಲಿ ತೈಲ ಬೆಲೆಯೇರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತನ್ನ ಕಾರ್ಯತಂತ್ರದ ತೈಲ ಸಂಗ್ರಹಾರದಿಂದ 15 ದಶಲಕ್ಷ ಬ್ಯಾರೆಲ್ ತೈಲ(A barrel of oil)ವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಅಮೆರಿಕ ಘೋಷಿಸಿದೆ.

ತೈಲ ದರ ಹೆಚ್ಚಿದರೆ ಇನ್ನಷ್ಟು ತೈಲಗಳನ್ನು ಬಿಡುಗಡೆಗೊಳಿಸಲಾಗುವುದು. ಉಕ್ರೇನ್ ಮೇಲಿನ ರಶ್ಯದ ದಾಳಿಯಿಂದಾಗಿ ಏರಿಕೆಯಾಗಿರುವ ತೈಲ ದರವನ್ನು ನಿಯಂತ್ರಿಸಲು ಈ ವಸಂತಕಾಲದಲ್ಲಿ ಅಧಿಕೃತಗೊಳಿಸಿದ 180 ದಶಲಕ್ಷ ಬ್ಯಾರೆಲ್ ಬಿಡುಗಡೆಯ ಅಂತಿಮ ಕಂತು ಇದಾಗಿದೆ. 

ತೈಲ ಮಾರುಕಟ್ಟೆಯನ್ನು ಅಡ್ಡಿಪಡಿಸುವ ರಶ್ಯದ ಅಥವಾ ಇತರ ಜಾಗತಿಕ ಕ್ರಮಗಳಿಂದಾಗಿ ಗಣನೀಯ ಪ್ರಮಾಣದಲ್ಲಿ  ಹೆಚ್ಚುವರಿ ಮಾರಾಟಗಳನ್ನು ಕೈಗೊಳ್ಳಲು ಅಮೆರಿಕ ಸಿದ್ಧವಿದೆ ಎಂಬುದನ್ನು ಈ ನಿರ್ಧಾರ ಸ್ಪಷ್ಟಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News