ಉಕ್ರೇನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ: ಇಸ್ರೇಲ್

Update: 2022-10-19 17:03 GMT

ಟೆಲ್ ಅವೀವ್, ಅ.19: ಉಕ್ರೇನ್ ಗೆ ಶಸ್ರ್ತಾಸ್ತ್ರ(Arms to Ukraine) ಪೂರೈಸುವುದಿಲ್ಲ ಎಂದು ಇಸ್ರೇಲ್(Israel) ನ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್ ಪಡೆಗಳನ್ನು ಬಲಪಡಿಸುವ ಇಸ್ರೇಲ್ ನ ಕ್ರಮವು ದ್ವಿಪಕ್ಷೀಯ ಸಂಬಂಧವನ್ನು ತೀವ್ರವಾಗಿ ಹಾಳು ಮಾಡಲಿದೆ ಎಂದು ರಶ್ಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ನ ಈ ಸ್ಪಷ್ಟನೆ  ಹೊರಬಿದ್ದಿದೆ.

ಉಕ್ರೇನ್ ಗೆ ಸಂಬಂಧಿಸಿ ನಮ್ಮ ನೀತಿ ಬದಲಾಗುವುದಿಲ್ಲ. ನಾವು ಪಶ್ಚಿಮದೊಂದಿಗೆ ನಿಲ್ಲುತ್ತೇವೆ ಮತ್ತು ಬೆಂಬಲಿಸುತ್ತೇವೆ. ಆದರೆ ಉಕ್ರೇನ್  ಗೆ ಶಸ್ರ್ತಾಸ್ತ್ರ ವ್ಯವಸ್ಥೆ ಪೂರೈಸುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ರಾಯಭಾರಿಗಳ ಸಭೆಯಲ್ಲಿ ಗಾಂಟ್ಸ್ ಹೇಳಿದ್ದಾರೆ.

 ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭವಾದಂದಿನಿಂದಲೂ ರಶ್ಯವು ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ಹೆಜ್ಜೆಯನ್ನಿಡುತ್ತಿದೆ. ನೆರೆ ದೇಶ ಸಿರಿಯಾದಲ್ಲಿ ತನ್ನ  ವಾಯುದಾಳಿ  ಅಭಿಯಾನವನ್ನು ಮುಂದುವರಿಸಬೇಕಿದ್ದರೆ ಇಸ್ರೇಲ್ಗೆ ರಶ್ಯದ ಸಹಕಾರದ ಅಗತ್ಯವಿದೆ. ಅಲ್ಲದೆ ರಶ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೆಹೂದಿಗಳು ವಾಸಿಸುತ್ತಿರುವುದರಿಂದ ರಶ್ಯದ ಜತೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಇಸ್ರೇಲ್ ಆದ್ಯತೆ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News