×
Ad

ಜಾಗತಿಕ ಉಗ್ರರ ಪಟ್ಟಿಯಲ್ಲಿ ಶಾಹಿದ್ ಮಹ್ಮೂದ್ ಸೇರ್ಪಡೆಗೆ ಚೀನಾ ತಡೆ

Update: 2022-10-19 23:06 IST

ವಿಶ್ವಸಂಸ್ಥೆ, ಅ.19: ಪಾಕಿಸ್ತಾನ ಮೂಲದ ಲಷ್ಕರೆ ತೈಯಬ್ಬ(Taiyabba)(ಎಲ್ಇಟಿ) ಭಯೋತ್ಪಾದಕ ಶಾಹಿದ್ ಮಹ್ಮೂದ್ನನ್ನು (Shahid Mahmood)ಜಾಗತಿಕ ಉಗ್ರನೆಂದು ಪಟ್ಟಿ ಮಾಡುವ ಅಮೆರಿಕ ಹಾಗೂ ಭಾರತದ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆನೀಡಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್‌ ಖೈದಾ(Al Qaeda)ನಿರ್ಬಂಧ ಸಮಿತಿಯ ಜಾಗತಿಕ ಉಗ್ರರ ಪಟ್ಟಿಗೆ ಶಾಹಿದ್ ಮಹ್ಮೂದ್ನನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಭಾರತ ಮತ್ತು ಅಮೆರಿಕ ಮುಂದಿರಿಸಿದ್ದವು. ಆದರೆ ಇದಕ್ಕೆ ಚೀನಾ ತಡೆಯೊಡ್ಡಿದೆ. ಜಾಗತಿಕ ಉಗ್ರರ ಪಟ್ಟಿಗೆ ಪಾಕ್ ಮೂಲದ ಭಯೋತ್ಪಾದಕರ ಸೇರ್ಪಡೆಗೆ ಕಳೆದ 4 ತಿಂಗಳಲ್ಲಿ 4ನೇ ಬಾರಿ ಚೀನಾ ತಡೆಯೊಡ್ಡಿದಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News