×
Ad

ಹಕ್ಕುಗಳಿಗೆ ಧ್ವನಿ ಎತ್ತುವವರನ್ನು ಸರಕಾರಿ ಪ್ರಾಯೋಜಿತವಾಗಿ ಧಮನ: ತಾಹೀರ್ ಹುಸೇನ್

Update: 2022-10-20 20:27 IST

ಉಡುಪಿ, ಅ.20: ಇಂದು ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ. ಸರಕಾರದ ವಿರುದ್ಧ ಹೋರಾಟ ನಡೆಸುವ ರೈತರಿಗೆ ಖಾಲಿಸ್ತಾನ, ಆದಿವಾಸಿಗಳಿಗೆ ನಕ್ಸರು ಹಾಗೂ ಮುಸ್ಲಿಮರಿಗೆ ಭಯೋತ್ಪಾದನೆಯ ಪಟ್ಟ ಕಟ್ಟ ಲಾಗುತ್ತಿದೆ. ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರನ್ನು ಸರಕಾರಿ ಪ್ರಾಯೋಜಿತವಾಗಿ ಧಮನಿಸುವ ಹಾಗೂ ಹೆದರಿಸುವ ಕಾರ್ಯ ನಡೆಯುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ‘ದೇಶ್ ಮೆ ಬಡಾ ಬವಾಲ್ -ರೋಟಿ, ರೋಜಿ ಕಾ ಸವಾಲ್’ ಎಂಬ ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜಾಥವು ಉಡುಪಿಗೆ ಗುರುವಾರ ಆಗಮಿಸಿ ರುವ ಹಿನ್ನೆಲೆಯಲ್ಲಿ ಉಡುಪಿ ಲಯನ್ಸ್ ಭವನದಲ್ಲಿ ನಡೆದ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ತೀವ್ರಗತಿಯ ಬೆಲೆ ಏರಿಕೆಯಿಂದ ದುಡಿಮೆ ಕಡಿಮೆಯಾಗುತ್ತಿದೆ. ಪ್ರತಿ ಯೋಜನೆಯಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬ್ಯಾಂಕಿನಲ್ಲಿರುವ ನಮ್ಮ ಹಣವನ್ನು ಸರಕಾರದ ನೆರವಿನಿಂದ ಲೂಟಿ ಮಾಡುವ ಕಾರ್ಯ ಬಂಡ ವಾಳಶಾಹಿಗಳಿಂದ ನಡೆಯುತ್ತಿದೆ. ನಿರುದ್ಯೋಗ ಸಮಸ್ಯೆಯಿಂದ ಯುವಕರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಯುವಕ ಆತ್ಮಹತ್ಯೆ ಪ್ರಮಾಣದಲ್ಲಿ ಶೇ.೨೪ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಸಾರ್ವಜನಿಕರ  ಜೀವನ ನರಕಮಯವಾಗುತ್ತಿದೆ ಎಂದು ಅವರು ದೂರಿದರು.

ಇಂದು ಅಗತ್ಯವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಚರ್ಚೆಗೆ ಬರುತ್ತಿಲ್ಲ. ಅದರ ಬದಲು ಪರಸ್ಪರ ಧ್ವೇಷ ಮೂಡಿಸುವ ಹಾಗೂ ಧರ್ಮಗಳ ಮಧ್ಯೆ ಗಲಭೆ ಸೃಷ್ಠಿಸಿ ಅಶಾಂತಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮೂಲಭೂತ ಸಮಸ್ಯೆಗಳು ನಮ್ಮ ನಡುವೆ ಪ್ರಮುಖ ವಿಷಯವೇ ಆಗುತ್ತಿಲ್ಲ.  ಈ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.

ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಎಫ್‌ಐಟಿಯು ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ರಾಜ್ಯ ಕಾರ್ಯದರ್ಶಿ ಹಬಿಬುಲ್ಲಾ ಮಾತನಾಡಿದರು. ಅಧ್ಯಕ್ಷತೆಯನ್ನು ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ವಹಿಸಿದ್ದರು.

ವೇದಿಕೆಯಲ್ಲಿ ಮುಖಂಡರಾದ ಮುಜಾಹಿದ್ ಪಾಷ, ಜಿಲ್ಲಾ ಉಪಾಧ್ಯಕ್ಷ ರಾದ ಡಾ.ಶಾಹಜಾನ್, ವಿಜಯ ಪಡುಕುದ್ರು, ಜಿಲ್ಲಾ ಮಹಿಳಾ ಸಂಚಾಲಕಿ ಜಮಿಲಾ ಸದಿದಾ, ಗ್ರಾಪಂ ಸದಸ್ಯೆ ಮಮ್ತಾಝ್ ಉಪಸ್ಥಿತರಿದ್ದರು. ಇದ್ರಿಸ್ ಹೂಡೆ ಪ್ರಾಸ್ತಾವಿಕಾಗಿ ಮಾತನಾಡಿ ಸ್ವಾಗತಿಸಿದರು. ಅನ್ವರ್ ಅಲಿ ಕಾಪು ಕಾರ್ಯ ಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್ ಕೋಡಿಬೆಂಗ್ರೆ ವಂದಿಸಿದರು.

‘ನಾವು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರವಾಗಬೇಕಾದರೆ ಈಗ ಇರುವ ವ್ಯವಸ್ಥೆ ಬದಲಾಗಬೇಕು. ಈ ವ್ಯವಸ್ಥೆ ಸರಿಯಾಗ ಬೇಕಾದರೆ ನಮ್ಮ ಮನಸ್ಥಿತಿ ಬದಲಾವಣೆ ಆಗಬೇಕು. ಅದಕ್ಕೆ ಚುನಾವಣೆ ಸಂದರ್ಭದಲ್ಲಿ ಮೌಲಾಧ್ಯಾರಿತ ರಾಜಕೀಯ ಮಾಡುವ ವ್ಯಕ್ತಿಗೆ ಮತ ಹಾಕಿ ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವದಲ್ಲಿರುವ ಮತದಾನ ಹಕ್ಕನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಆಗ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲುವ ಸಾಧ್ಯವಾಗುತ್ತದೆ’
-ಅಡ್ವಕೇಟ್ ತಾಹೀರ್ ಹುಸೇನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News