ಬಂಗಾಳ ಕೊಲ್ಲಿಯಲ್ಲಿ ಉಂಟಾದ ನಿಮ್ನ ಒತ್ತಡ ಪ್ರದೇಶ ಚಂಡಮಾರುತವಾಗಿ ಪರಿವರ್ತನೆ: ಹವಾಮಾನ ಇಲಾಖೆ
ಹೊಸದಿಲ್ಲಿ, 20: ಬಂಗಾಳ ಕೊಲ್ಲಿಯಲ್ಲಿ ನಿಮ್ನ ಒತ್ತಡ ಪ್ರದೇಶ ರೂಪುಗೊಂಡಿದೆ ಹಾಗೂ ಅದು ಮುಂದಿನ ನಾಲ್ಕು ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ(Meteorological Department) ಗುರುವಾರ ತಿಳಿಸಿದೆ.
ಆಗ್ನೇಯ ಹಾಗೂ ಪೂರ್ವ ಮಧ್ಯೆ ಬಂಗಾಳ ಕೊಲ್ಲಿಯಲ್ಲಿ(Bay of Bengal) ನಿಮ್ನ ಒತ್ತಡ ಪ್ರದೇಶ ರೂಪುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಅಕ್ಟೋಬರ್ 24ರಂದು ಒತ್ತಡ ಪ್ರದೇಶವಾಗಿ ಹಾಗೂ ಅಕ್ಟೋಬರ್ 24ರಂದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.
ತಮಿಳುನಾಡು, ಪುದುಚೇರಿ, ಕಾರೈಕಾಲ್, ಕೇರಳ ಹಾಗೂ ಮಾಹೆಯಲ್ಲಿ ಅಕ್ಟೋಬರ್ 22ರ ವರೆಗೆ ಲಘುವಿನಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಕರ್ನಾಟಕ ಹಾಗೂ ಲಕ್ಷದ್ವೀಪದ ದಕ್ಷಿಣ ಒಳನಾಡು ಪ್ರದೇಶಗಳು ಗುರುವಾರ ಮಳೆ ಸ್ವೀಕರಿಸಲಿದೆ ಎಂದು ಅದು ಹೇಳಿದೆ.
ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 22ರ ವರೆಗೆ ಲಘುವಿನಿಂದ ಕೂಡಿದ ಸಾಧಾರಣ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಚಂಡಮಾರುತ ಪಶ್ಚಿಮಕ್ಕೆ ಸಾಗುವ ಸಾಧ್ಯತೆ ಇದೆ ಹಾಗೂ ತಮಿಳುನಾಡು, ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾದಲ್ಲಿ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿಯ 7 ಜಿಲ್ಲೆಗಳ ಆಡಳಿತಕ್ಕೆ ಒಡಿಶಾ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಈ ಜಿಲ್ಲೆಗಳು ಗಂಜಾಮ್, ಪುರಿ, ಖುರ್ದಾ, ಜಗತ್‌ಸಿಂಘ್‌ಪುರ, ಕೇಂದ್ರಪಾರ, ಭದ್ರಾಕ್ ಹಾಗೂ ಬಾಲಸೋರೆ.