×
Ad

ಸಾಣೂರು: ರಬ್ಬರ್ ಪ್ಲಾಂಟೇಶನ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

Update: 2022-10-20 21:04 IST

ಕಾರ್ಕಳ, ಅ.20: ರಬ್ಬರ್ ಪ್ಲಾಟೆಂಶನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಮೃತದೇಹವು ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಅ.19ರಂದು ಪತ್ತೆಯಾಗಿದೆ.

ಮೃತರನ್ನು ಕೇರಳ ಮಲಪ್ಪುರಂ ನಿವಾಸಿ ಗೋಪಿ (60) ಎಂದು ಗುರುತಿಸ ಲಾಗಿದೆ. ರಬ್ಬರ್ ಪ್ಲಾಂಟೇಶನ್‌ಗೆ ಹುಲ್ಲು ಕಟ್ಟಿಂಗ್ ಮಾಡಲು ವಸಂತ ಎಂಬವರು ಆಗಮಿಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡು ಬಂದಿದೆ.

ಗೋಪಿ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಾಹುಲೇಯನ್ ನಾಪತ್ತೆಯಾಗಿದ್ದು, ಮೊಬೈಲ್ ಪೋನ್ ಸ್ವಿಚ್‌ಆಫ್ ಆಗಿರುತ್ತದೆ. ಗೋಪಿ ಹಾಗೂ ಬಾಹುಲೇಯನ್ ವಾರದ ಹಿಂದೆ ಊರಿಗೆ ಹೋಗಿ ಕಳೆದ ಮಂಗಳವಾರ ವಾಪಾಸು ಕೆಲಸಕ್ಕೆ ಬಂದಿದ್ದರು. ಅ.18ರ ಸಂಜೆಯಿಂದ ಅ.19ರ ಬೆಳಗಿನ ಮಧ್ಯಾವಧಿಯಲ್ಲಿ ಗೋಪಿಯು ಯಾವುದೋ ಕಾರಣದಿಂದ ಬೆಂಕಿಯಿಂದ ಸುಟ್ಟು ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಬಾಹುಲೇಯನ್ ನಾಪತ್ತೆಯಾಗಿರು ವುದರಿಂದ ಗೋಪಿಯ ಮರಣದಲ್ಲಿ ಸಂಶಯ ಇದೆ ಎಂದು ಪ್ಲಾಂಟೇಶನ್‌ನ ಉಸ್ತುವಾರಿ ದಿಲೀಪ್ ಜಿ. ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News