×
Ad

ಉಪ್ಪಳ: ಖಾಸಗಿ ಬಸ್ - ಲಾರಿ ನಡುವೆ ಢಿಕ್ಕಿ; ಸುಮಾರು 20 ಮಂದಿಗೆ ಗಾಯ

Update: 2022-10-22 09:25 IST

ಕಾಸರಗೋಡು: ಬೆಂಗಳೂರಿಗೆ ತೆರಲುತ್ತಿದ್ದ ಖಾಸಗಿ ಬಸ್‌ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿ ಸುಮಾರು 20 ಮಂದಿ ಗಾಯಗೊಂಡಿರುವ ಘಟನೆ ಉಪ್ಪಳ ಗೇಟ್ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ.

ಕೊಹಿನೂರ್ ಸಂಸ್ಥೆಗೆ ಸೇರಿದ ಬಸ್‌ ಕಾಞಂಗಾಡ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮಂಗಳೂರಿನಿಂದ ಕೊಚ್ಚಿ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ ನಲ್ಲಿದ್ದ ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News