ಅಪ್ರಾಪ್ತೆಯನ್ನು ಸಾಯಿಸಿಲ್ಲ ಎಂದು ಅತ್ಯಾಚಾರ ಆರೋಪಿಯ ಶಿಕ್ಷೆ ಪ್ರಮಾಣ ಇಳಿಸಿದ ನ್ಯಾಯಾಲಯ

Update: 2022-10-22 15:47 GMT

 ಭೋಪಾಲ,ಅ.22: ಅತ್ಯಾಚಾರ ಪ್ರಕರಣದ ದೋಷಿಯು ಸಂತ್ರಸ್ತ ಮಗುವನ್ನು ಕೊಲ್ಲದೇ ಬಿಟ್ಟಿದ್ದ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಜೈಲುಶಿಕ್ಷೆಗೆ ತಗ್ಗಿಸಿದೆ.

ಆರೋಪಿಯ ಅಪರಾಧ ರಾಕ್ಷಸೀಯವಾಗಿದ್ದರೂ,ಆತ ನಾಲ್ಕು ವರ್ಷದ ಬಾಲಕಿಯನ್ನು ಜೀವಂತ ಬಿಡುವಷ್ಟು ’ಕರುಣೆ ’ ಹೊಂದಿದ್ದ,ಹೀಗಾಗಿ ಆತನ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಸುಬೋಧ ಅಭಯಂಕರ್ ಮತ್ತು ಎಸ್.ಕೆ.ಸಿಂಗ್ ಅವರ ಪೀಠವು ಹೇಳಿತು.

ತನ್ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಎಂದು ವಾದಿಸಿದ್ದ ಆರೋಪಿಯು,ಪ್ರಾಸಿಕ್ಯೂಷನ್ ರಾಸಾಯನಿಕ ವಿಶ್ಲೇಷಣೆಯ ವರದಿಯನ್ನು ಮಂಡಿಸಿರಲಿಲ್ಲ ಮತ್ತು ತಾನು ಈಗಾಗಲೇ ಕೆಲಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ತನ್ನ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದ.

 ರಾಸಾಯನಿಕ ವರದಿಯನ್ನು ಸಲ್ಲಿಸದ್ದಕ್ಕಾಗಿ ಪೊಲೀಸರ ನಿರ್ಲಕ್ಷವನ್ನು ಪೀಠವು ಬೆಟ್ಟು ಮಾಡಿತಾದರೂ,ವರದಿ ಇಲ್ಲವೆಂಬ ಮಾತ್ರಕ್ಕೆ ನ್ಯಾಯಾಲಯವು ದಾಖಲೆಯಲ್ಲಿರುವ ಇತರ ಸಾಕ್ಷಗಳನ್ನು ಪರಶೀಲಿಸಲು ಅಡ್ಡಿಯಾಗುವುದಿಲ್ಲ. ಈ ಪ್ರಕರಣದಲ್ಲಿಯೂ ಸಾಕ್ಷಿಗಳ ಹೇಳಿಕೆ ಮತ್ತು ವೈದ್ಯಕೀಯ ತಪಾಸಣೆ ವರದಿ ಆರೋಪಿಯು ಘೋರ ಅಪರಾಧವೆಸಗಿದ್ದಾನೆ ಎನ್ನುವುದನ್ನು ಸಾಬೀತುಗೊಳಿಸಿವೆ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: ಉತ್ತರ ಪ್ರದೇಶ: ವಿದ್ಯುತ್ ಕೈಕೊಟ್ಟ ಕಾರಣ ಡಯಾಲಿಸಿಸ್‌ಗಾಗಿ ಕಾಯುತ್ತಿದ್ದ ಕಿಡ್ನಿ ರೋಗಿ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News