ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಮ್ಮೇಳನ
ಉಡುಪಿ : ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇದರ ಜಿಲ್ಲಾ ಸಮ್ಮೇಳನವು ಉಡುಪಿಯ ಹೊಟೇಲ್ ಸಾಯಿ ರೆಸಿಡೆನ್ಸಿಯಲ್ಲಿ ಶನಿವಾರ ನಡೆಯಿತು.
ಸಮ್ಮೇಳನವನ್ನು ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಕೆ.ಶಂಕರ್ ಮಾತನಾಡಿದರು. ಅಧ್ಯಕ್ಷ ತೆಯನ್ನು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ಒಡೆಯರಹೋಬಳಿ ವಹಿಸಿದ್ದರು.
ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಒಂದೇ ರೂಪದ ಕನಿಷ್ಠ ಕೂಲಿ ಜಾರಿಯಾಗ ಬೇಕು. ತುಟ್ಟಿ ಭತ್ಯೆ ನೀಡಬೇಕು. ಬೀಡಿ ಕಾರ್ಮಿಕರಿಗೆ ಗ್ರಾಚುವಿಟಿ ಕೊಡಬೇಕು. ಎಲ್ಲಾ ಬೀಡಿ ಕಾರ್ಮಿಕರಿಗೆ ಲೋಗ್ ಪುಸ್ತಕ ಕೊಡಬೇಕು. ಕಳಪೆ ಎಲೆ ಕೊಟ್ಟು, ದಂಡ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಪಿ.ಎಫ್. ತೆಗೆಯುವಾಗ, ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದು. ತಿಂಗಳಿಗೆ 6000ರೂ. ಪಿಂಚಣಿ ಕೊಡಬೇಕು. ಇ.ಎಸ್.ಐ. ಸೌಲಭ್ಯ ಒದಗಿಸಬೇಕು. ವಾರದಲ್ಲಿ 6ದಿನ ಕೆಲಸ ಕೊಡಬೇಕೆಂಬ ನಿರ್ಣಯವನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.
ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತ ಮಾಡಿ ವರದಿ ಮಂಡನೆ ಮಾಡಿದರು ಸಮಿತಿ ಸದಸ್ಯರಾದ ನಳಿನಿ ಶ್ರದ್ಧಾಂಜಲಿ ಓದಿ ಹೇಳಿದರು ಜಿಲ್ಲಾ ಖಜಾಂಚಿ ಕವಿರಾಜ್. ಎಸ್ ಲೆಕ್ಕ ಪತ್ರ ಮಂಡಿಸಿ ಕೊನೆಯಲ್ಲಿ ಧನ್ಯವಾದ ನೀಡಿದರು. ಜಿಲ್ಲಾ ಉಪಾಧ್ಯಕ್ಷ ರಾದ ಬಲ್ಕೀಸ್,ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.