ಶೈಕ್ಷಣಿಕ ರಂಗದ ಸಾಧಕಿ, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ನಮ್ಮ ನಾಡ ಒಕ್ಕೂಟ ವತಿಯಿಂದ ಸನ್ಮಾನ

Update: 2022-10-22 17:01 GMT
ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನವೀನ್ ಚಂದ್ರ ಹೆಗ್ಡೆರನ್ನು ಸನ್ಮಾನಿಸುತ್ತಿರುವುದು

ಹೆಬ್ರಿ: ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ವತಿಯಿಂದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಹೆಂಗವಳ್ಳಿ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನವೀನ್ ಚಂದ್ರ ಹೆಗ್ಡೆ ಹಾಗೂ ಎಸೆಸೆಲ್ಸಿಯಲ್ಲಿ ಶೇ. 100 ಅಂಕ  ಪಡೆದಿರುವ ಸಿದ್ದಾಪುರ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ ಅಲ್ಬಾಡಿ ಇವರುಗಳಿಗೆ ಸನ್ಮಾನಿಸುವ ಸಮಾರಂಭವನ್ನು ಬೆಳ್ವೆ ಸಂದೇಶ ಕಿಣಿ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು, ನಮ್ಮ ನಾಡ ಒಕ್ಕೂಟ- ಉಡುಪಿ ಜಿಲ್ಲಾಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಬೆಳ್ವೆ ಜುಮಾ ಮಸೀದಿಯ ಮೌಲಾನ ಮುಹಮ್ಮದ್ ರಫೀಕ್  ಅವರು ಕುರಾನ್ ಪಠಣ ಹಾಗೂ ಅದರ ಅನುವಾದದೊಂದಿಗೆ ಆರಂಭಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮುಸ್ತಾಕ್ ಹೆನ್ನಾಬೈಲ್ ಅವರು, ಇಂತಹ ಕಾರ್ಯಕ್ರಮಗಳ ಅಗತ್ಯತೆಯ ಬಗ್ಗೆ ಮಾತನಾಡಿದರು.

ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ  ಗೀತಾ ಎಚ್.ಎಸ್.ಎನ್ ಫೌಂಡೇಶನ್ ಕೋಟೇಶ್ವರ ಇದರ ಅಧ್ಯಕರಾದ ಶಂಕರ್ ಐತಳ್, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಜಯರಾಂ ಶೆಟ್ಟಿ, ಬೆಳ್ವೆ  ಶ್ರೀ ಶಂರನಾರಾಯಣ ದೇವಸ್ಥಾನದ ಆಡಳಿತ ಮೂಕ್ತೆಸರ ಶಂಕರ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಸಂತ್ ಶೆಟ್ಟಿ ಹಾಗೂ ಮಾಜಿ ಕಾರ್ಯದರ್ಶಿ ಪಟ್ಟಾಭಿರಾಮ್ ಭಟ್, ಉದ್ಯಮಿ ವಸಂತ್ ಶೆಟ್ಟಿ ಅಲ್ಬಡಿ ,ನಮ್ಮ ನಾಡ ಒಕ್ಕೂಟ- ಹೆಬ್ರಿ ಘಟಕದ ಉಪಾಧ್ಯಕ್ಷ ಅಬ್ದುಲ್ ಸಮದ್ ಹೈಕಾಡಿ, ನಮ್ಮ ನಾಡ ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಮುಡುಗೋಪಾಡಿ, ಸಗೀರ್ ಹೈಕಾಡಿ ಉಪಸ್ಥಿತರಿದ್ದರು.

ಅಸಿಫ್ ಅಲ್ವಾಡಿ ಸನ್ಮಾನ ಪತ್ರ ವಾಚಿಸಿ, ಅರಾಫತ್ ಅಲ್ಬಡಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮುಹಮ್ಮದ್ ರಯಾನ್ ವಂದಿಸಿದರು.

ಈ ಸನ್ಮಾನ ಸಮಾರಂಭದ ನೇತೃತ್ವವನ್ನು ನಮ್ಮ ನಾಡ ಒಕ್ಕೂಟ-ಹೆಬ್ರಿ ಘಟಕದ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಅಜೆಕಾರು ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್  ಬೆಳ್ವೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News