ಇರಾನ್‌ನ ಪರಮಾಣು ಸಂಸ್ಥೆಯ ಇ-ಮೇಲ್ ವ್ಯವಸ್ಥೆ ಹ್ಯಾಕ್

Update: 2022-10-22 18:43 GMT

ಟೆಹ್ರಾನ್, ಅ.22: ಇರಾನ್‌ನ ಪರಮಾಣು ಇಂಧನ ಉತ್ಪಾದನೆ ಮತ್ತು ಅಭಿವೃದ್ಧಿ ಸಂಸ್ಥೆಯ ಆಂತರಿಕ ಇ-ಮೇಲ್ ವ್ಯವಸ್ಥೆಯನ್ನು ಸೈಬರ್ ತಂಡವೊಂದು ಹ್ಯಾಕ್ ಮಾಡಿದ್ದು, ಬಂಧಿತ ಕಾರ್ಯುಕರ್ತರ ಬಿಡುಗಡೆಗೆ ಷರತ್ತು ವಿಧಿಸಿದೆ ಎಂದು ವರದಿಯಾಗಿದೆ.

ಬಂಧಿತ ರಾಜಕೀಯ ಕೈದಿಗಳನ್ನು 24 ಗಂಟೆಯೊಳಗೆ ಬಿಡುಗಡೆಗೊಳಿಸದಿದ್ದರೆ ಪರಮಾಣು ಸಂಸ್ಥೆಯ ಆಂತರಿಕ ದತ್ತಾಂಶಗಳನ್ನು ಸೋರಿಕೆ ಮಾಡುವುದಾಗಿ ‘ಬ್ಲ್ಯಾಕ್ ರಿವಾರ್ಡ್’ ಎಂದು ಕರೆಸಿಕೊಳ್ಳುವ ಹ್ಯಾಕರ್‌ಗಳು ಶುಕ್ರವಾರ ಬೆದರಿಕೆ ಒಡ್ಡಿದ್ದಾರೆ ಎಂದು ಅಲ್ ಅರೇಬಿಯಾ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News