ಇಮ್ರಾನ್ ಖಾನ್ 'ದೃಢೀಕೃತ ಕಳ್ಳ' ಎಂದ ಪಾಕಿಸ್ತಾನ ಪ್ರಧಾನಿ !

Update: 2022-10-23 03:55 GMT
ಶೆಹಬಾಝ್ ಶರೀಫ್ - ಇಮ್ರಾನ್ ಖಾನ್

ಇಸ್ಲಾಮಾಬಾದ್: ತೋಷಖಾನಾ ಆಸ್ತಿ ಪ್ರಕರಣ (Toshakhana assets case)ವನ್ನು ಮುಚ್ಚಿಹಾಕಿದ ಆರೋಪದಲ್ಲಿ ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು, ಹಾಲಿ ಪ್ರಧಾನಿ ಶೆಹಬಾಝ್ ಶರೀಫ್ (Shehbaz Sharif) "ದೃಢೀಕೃತ ಕಳ್ಳ" (certified thief) ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಸರ್ಕಾರಕ್ಕೆ ಬಂದಿದ್ದ ಉಡುಗೊರೆಗಳನ್ನು ಮಾರಾಟ ಮಾಡಿ ಲಭ್ಯವಾದ ಹಣದ ಬಗ್ಗೆ ಮಾಹಿತಿ ನೀಡಲು ವಿಫಲವಾದ ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಚುನವಣಾ ಆಯೋಗ ಶುಕ್ರವಾರ ಇಮ್ರಾನ್ ಖಾನ್ (70) ಅವರನ್ನು ಅನರ್ಹಗೊಳಿಸಿ ಆದೇಶ ನೀಡಿತ್ತು.

ಲಾಹೋರ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ ಷರೀಫ್ ಅವರು, ಖಾನ್, "ದೃಢೀಕೃತ ಸುಳ್ಳುಗಾರ ಮತ್ತು ಕಳ್ಳ" ಎಂದು ಸಾಬೀತಾಗಿದೆ ಎಂದು ಹೇಳಿದರು. ಆದಾಗ್ಯೂ ಇದು ಸಂತೋಷದ ಕ್ಷಣ ಅಲ್ಲ ಎಂದು ಅವರು ಎಚ್ಚರಿಸಿದರು.

ರಾಜ್ಯ ಖಜಾನೆಯಿಂದ ಅಥವಾ ತೋಷಖಾನಾದಿಂದ ರಿಯಾಯಿತಿ ಬೆಲೆಯಲ್ಲಿ ಉಡುಗೊರೆಗಳನ್ನು ಖರೀದಿಸಿದ ಖಾನ್, ದೊಡ್ಡ ಲಾಭಕ್ಕಾಗಿ ಇವುಗಳನ್ನು ಮಾರಾಟ ಮಾಡಿದ್ದಾರೆ. ಅವರು ಉಡುಗೊರೆಗಳನ್ನು ಹರಾಜು ಮಾಡಿ, ಬಂದ ಹಣವನ್ನು ಸರ್ಕಾರಿ ಬೊಕ್ಕಸಕ್ಕೆನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ನಿರ್ದಿಷ್ಟ ಮೊತ್ತವನ್ನು ಪಾವತಿಸಿ ನೀವು ಕೂಡಾ ಉಡುಗೊರೆ ಖರೀದಿಸಬಹುದು ಎಂಬ ಮಾಹಿತಿ ಸಂಪುಟ ವಿಭಾಗದಿಂದ ಬಂದಿತ್ತು. ಆದರೆ "ಅಗತ್ಯವಿಲ್ಲ. ಧನ್ಯವಾದಗಳು ಅವುಗಳನ್ನು ತೋಷಖಾನದಲ್ಲಿ ಠೇವಣಿಯಾಗಿ ಇಡಿ" ಎಂದು ಉತ್ತರಿಸಿದ್ದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News