×
Ad

ರಸ್ತೆ ಅಪಘಾತ: ಗಾಯಾಳು ಮೃತ್ಯು

Update: 2022-10-23 21:53 IST

ಉಳ್ಳಾಲ: ಉಚ್ಚಿಲ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ  ರವಿವಾರ ಮೃತಪಟ್ಟಿದ್ದಾರೆ.

ಉಚ್ಚಿಲ ನಿವಾಸಿ ನಾರಾಯಣ ಪೂಜಾರಿ (82) ಮೃತರು. ಶುಕ್ರವಾರ ಸಂಜೆ ನಾರಾಯಣ ಅವರು ಉಚ್ಚಿಲದಲ್ಲಿ ಹೆದ್ದಾರಿ ದಾಟುತ್ತಿದ್ದ ಸಂದರ್ಭ ಕೇರಳಕ್ಕೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ  ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಪಘಾತ ನಡೆಸಿದ್ದ ಕಾರನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News