×
Ad

ಸೌರ ಯಂತ್ರ ಕೊಡುಗೆ ನೀಡಿ ದೀಪಾವಳಿ ಆಚರಣೆ

Update: 2022-10-24 19:00 IST

ಉಡುಪಿ : ಜೋಸ್ ಆಲೂಕಸ್ ಆಭರಣ ಮಳಿಗೆ ಸಂಸ್ಥೆಯಿಂದ ದೀಪಾವಳಿ ಹಬ್ಬವನ್ನು ಸೌಹಾರ್ದಯುತವಾಗಿ ಉದ್ಯಾವರ ಹಿರಿಯ ನಾಗರಿಕರ ಕನಸಿನ ಮನೆ ಪುರ್ನವಸತಿ ಕೇಂದ್ರದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಸಂಸ್ಥೆಗೆ ತುರ್ತು ಬೆಳಕಿನ ವ್ಯವಸ್ಥೆಗೆ ಹಾಗೂ ಆಶ್ರಮವಾಸಿಗಳಿಗೆ ಬಿಸಿನೀರಿನ ಸೌಲಭ್ಯ ಒದಗಿಸಲು ಸೌರವಿದ್ಯುತ್ ಉಪಕರಣಗಳನ್ನು ಕೊಡುಗೆ ಯಾಗಿ ನೀಡಲಾಯಿತು. ಆಶ್ರಮ ವಾಸಿಗಳಿಗೆ ಸಿಹಿ ತಿಂಡಿ, ಸ್ನಾನದ ಎಣ್ಣೆ, ದೀಪದ ಎಣ್ಣೆಯನ್ನು ವಿತರಿಸಿದರು.

ಕಾರ್ಯಕ್ರಮವನ್ನು ಉದ್ಯಮಿ ಜಲೀಲ್ ಸಾಹೇಬ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರುಪಮಾ ಪ್ರಸಾದ್ ಶೆಟ್ಟಿ, ಜೋಸ್ ಅಲೂಕಾಸ್ ವ್ಯವಸ್ಥಾಪಕ ರಾಜೇಶ್, ನೀಲಾವತಿ ಎ., ಸೆಲ್ಕೊ ಕಂಪನಿಯ ಏರಿಯಾ ಮೆನೇಜರ್ ಸುರೇಶ್ ಕುಮಾರ್, ಹಿರಿಯ ನಾಗರಿಕರ ಕನಸಿನ ಮನೆ ಉದ್ಯಾವರ ವ್ಯವಸ್ಥಾಪಕಿ ಸೀಮಾ ದೇವಾಡಿಗ, ಕವಿತಾ ನಾಯ್ಕ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News