ಅನರ್ಹತೆ ವಿರುದ್ಧ ಇಮ್ರಾನ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ

Update: 2022-10-24 16:21 GMT

ಇಸ್ಲಮಾಬಾದ್, ಅ.24: ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಇಸ್ಲಮಾಬಾದ್ ಹೈಕೋರ್ಟ್(High Court) ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಸರಕಾರದ ಮುಖ್ಯಸ್ಥರಾಗಿ ವಿದೇಶದಿಂದ ಪಡೆದ ಉಡುಗೊರೆಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಇಮ್ರಾನ್‌ ಖಾನ್ ತಪ್ಪಿತಸ್ಥ ಎಂದು ಘೋಷಿಸಿದ್ದ ಪಾಕ್ ಚುನಾವಣಾ ಆಯೋಗ ಅವರನ್ನು ಸಾರ್ವಜನಿಕ ಹುದ್ದೆಯಿಂದ 5 ವರ್ಷ ಅನರ್ಹಗೊಳಿಸುವ ಜತೆಗೆ ಸಂಸದ್ ಸದಸ್ಯತ್ವದಿಂದಲೂ ಅನರ್ಹಗೊಳಿಸಿತ್ತು. ಆಯೋಗದ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಕೋರಿ ಇಮ್ರಾನ್ ಇಸ್ಲಮಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಆದೇಶವನ್ನು  ತಕ್ಷಣ ರದ್ದುಗೊಳಿಸಬೇಕು ಎಂದು ಕೋರಿರುವ ಬಗ್ಗೆ ಅಸಮಾಧಾನ ಸೂಚಿಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಈ ಪದವನ್ನು ಕೈಬಿಟ್ಟು 3 ದಿನದೊಳಗೆ ಪರಿಷ್ಕೃತ ಮೇಲ್ಮನವಿ ಸಲ್ಲಿಸುವಂತೆ ಇಮ್ರಾನ್ ಗೆ ಸೂಚಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News