ಇಮ್ರಾನ್ ಚುನಾವಣೆಗೆ ಸ್ಪರ್ಧಿಸಬಹುದು: ಪಾಕ್ ಹೈಕೋರ್ಟ್
Update: 2022-10-24 23:01 IST
ಇಸ್ಲಮಾಬಾದ್, ಅ.24: ಚುನಾವಣೆಯಲ್ಲಿ ಸ್ಪರ್ಧಿಸಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅರ್ಹರಾಗಿದ್ದಾರೆ ಎಂದು ಇಸ್ಲಮಾಬಾದ್ ಹೈಕೋರ್ಟ್ (Islamabad High Court)ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗ ಇಮ್ರಾನ್ ಖಾನ್ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅಕ್ಟೋಬರ್ 30ರಂದು ನಡೆಯುವ ಖೈಬರ್ ಫಖ್ತುಂಕ್ವಾ(Khyber Fakhtunkhwa) ಪ್ರಾಂತದ ಕುರ್ರಮ್ (Kurram)ಜಿಲ್ಲೆಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಈ ಆದೇಶ ಅಡ್ಡಿಯಾಗದು. ಚುನಾವಣಾ ಆಯೋಗದ ಆದೇಶದ ವಿರುದ್ಧ ಇಮ್ರಾನ್ ಖಾನ್ ಸಲ್ಲಿಸಿರುವ ಮೇಲ್ಮನವಿಯನ್ನು ಪರಿಷ್ಕರಿಸಿ ಮೂರು ದಿನದೊಳಗೆ ಹೊಸ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಇಸ್ಲಮಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಅಥರ್ ಮಿನಾಲ್ಲ ಹೇಳಿದ್ದಾರೆ.