×
Ad

ಟ್ರಸ್ ರಿಂದಾದ ಪ್ರಮಾದಗಳನ್ನು ಸರಿಪಡಿಸಲು ಯತ್ನಿಸುವೆ: ರಿಶಿ ಸುನಕ್

Update: 2022-10-25 22:32 IST

ಲಂಡನ್,ಅ.25: ಬ್ರಿಟನ್ನ ನೂತನ ಪ್ರಧಾನಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿರುವ ರಿಶಿ ಸುನಕ್(Rishi Sunak), ತನ್ನ ಪೂರ್ವಾಧಿಕಾರಿಯಿಂದಾದ ತಪ್ಪುಗಳನ್ನು ಸರಿಪಡಿಸಲು ತಾನು ಯತ್ನಿಸುವುದಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ಹಾಗೂ ಗಾಢವಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ತಾನು ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ. ಆದರೆ ಇದಕ್ಕಾಗಿ ದೇಶವು ಕೆಲವು ಕಠಿಣವಾದ ನಿರ್ಧಾರಗಳನ್ನು ಎದುರಿಸಲು ಸಿದ್ಧವಾಗಬೇಕೆಂದು ಸುನಾಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡೌನಿಂಗ್ ಸ್ಟ್ರೀಟ್ ನಲ್ಲಿರುವ ತನ್ನ ಕಾರ್ಯಾಲದ ಮುಂಭಾಗದಲ್ಲಿ ಭಾಷಣ ಮಾಡಿದ ಸುನಾಕ್ ಅವರು ನಿರ್ಗಮನ ಪ್ರಧಾನಿ ಲಿಝ್ ಟ್ರಸ್ ಅವರು ಮಾಡಿರುವ ತಪ್ಪುಗಳು, ದುರಾಲೋಚನೆ ಅಥವಾ ಕೆಟ್ಟ ಉದ್ದೇಶದಿಂದ ಆದುದಲ್ಲವೆಂದು ಹೇಳಿದರು. ಆರ್ಥಿಕ ಸ್ಥಿರತೆ ಹಾಗೂ ಆತ್ಮವಿಶ್ವಾಸವು ಈ ಸರಕಾರದ ಕಾರ್ಯಸೂಚಿಯ ಹೃದಯವಾಗಲಿದೆ’’ ಎಂದರು.

ದೇಶದಲ್ಲಿ ಗಗನಕ್ಕೇರಿರುವ ಇಂಧನ ದರ ಹಾಗೂ ಆಹಾರ ದರಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿರುವುದು ತನಗೆ ಅರಿವಿದೆ ಎಂದರು. ನಾನು ಸ್ವೀಕರಿಸಿರುವ ಈ ಉನ್ನತ ಹುದ್ದೆಯ ಹೊಣೆಗಾರಿಕೆಯ ಬಗ್ಗೆ ನನಗೆ ಅರಿವಿದೆ ಹಾಗೂ ನಾನು ಜನತೆಯ ಬೇಡಿಕೆಗಳಿಗೆ ಸ್ಪಂದಿಸಲಿದ್ದೇನೆ’’ ಎಂದು ಸುನಾಕ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News