ಟ್ರಸ್ ಸಂಪುಟದ ನಾಲ್ವರು ಸಚಿವರ ರಾಜೀನಾಮೆಗೆ ಸುನಕ್ ಸೂಚನೆ

Update: 2022-10-25 17:49 GMT

 ಲಂಡನ್,ಅ.25: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಮಂಗಳವಾರ ನೇಮಕಗೊಂಡ ಬೆನ್ನಲ್ಲೇ ರಿಶಿ ಸುನಾಕ್ (Rishi Sunak)ಅವರು ನಿರ್ಗಮನ ಪ್ರಧಾನಿ ಲಿಝ್ ಟ್ರಸ್ (Liz Truss)ಸಂಪುಟದ ನಾಲ್ವರು ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಇದೇ ವೇಳೆ ಮಹತ್ವದ ಉಪ ಪ್ರಧಾನಿ ಸ್ಥಾನಕ್ಕೆ ಡೊಮಿನಿಕ್ ರಿಬ್(Dominic Rib) ಹಾಗೂ ವಿತ್ತ ಸಚಿವರಾಗಿ ಜೆರೆಮಿ ಹಂಟ್ (Jeremy Hunt)ಅವರನ್ನು ನೇಮಿಸಿದ್ದಾರೆ.

ಬ್ರಿಟನ್ ಪ್ರಧಾನಿಯಾಗಿ ಬ್ರಿಟಿಶ್ ದೊರೆ ಮೂರನೇ ಚಾರ್ಲ್ಸ್ (Charles the Third)ಅವರಿಂದ ನೇಮಕಗೊಂಡ ಕ್ಷಣದಿಂದಲೇ ತಾನು ಕೆಲಸ ಆರಂಭಿಸುವುದಾಗಿ ಘೋಷಿಸಿದ್ದ ಸುನಕ್, ಸಂಪುಟದ ಪುನಾರಚನೆಗೆ ಮುಂದಾಗಿರುವುದು ಗಮನಾರ್ಹವಾಗಿದೆ.

   ಈವರೆಗೆ ಲಿಝ್ ಟ್ರಸ್ ಸಂಪುಟದಲ್ಲಿದ್ದ ನಾಲ್ವರು ಸಚಿವರ ರಾಜೀನಾಮೆಯನ್ನು ಸುನಕ್ ಕೇಳಿದ್ದಾರೆ. ಉದ್ಯಮ ಕಾರ್ಯದರ್ಶಿ ಜಾಕೊಬ್ ರೀಸ್ ಮೊಗ್(Jacob Rees Mogg), ನ್ಯಾಯಾಂಗ ಕಾರ್ಯದರ್ಶಿ ಬ್ರಾಂಡನ್ ಲೆವಿಸ್(Brandon Lewis), ಉದ್ಯೋಗ ಹಾಗೂ ಪಿಂಚಣಿ ಕಾರ್ಯದರ್ಶಿ ಕ್ಲೋ ಸ್ಮಿತ್(clo smith) ಹಾಗೂ ಅಭಿವೃದ್ಧಿ ಸಚಿವ ವಿಕಿಫೋರ್ಡ್ ಅವರ ರಾಜೀನಾಮೆಗೆ ಸೂಚಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

   ಉಪಪ್ರಧಾನಿಯಾಗಿ ನೇಮಕಗೊಂಡಿರುವ ಡೊಮಿನಿಕ್ ರಾಬ್ ಅವರು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಉಪಪ್ರಧಾನಿ ಅವರ ಸಂಪುಟದಲ್ಲಿ ನ್ಯಾಯಾಂಗ ಖಾತೆಯ ಕಾರ್ಯದರ್ಶಿಯಾಗಿದ್ದರು.

ಆದರೆ ಟ್ರಸ್ ಸಂಪುಟದಲ್ಲಿ ಬೊಕ್ಕಸ ಕಾರ್ಯದರ್ಶಿಯಾಗಿದ್ದ ಜೆರೆಮಿ ಹಂಟ್ (Jeremy Hunt)ಅವರನ್ನು ವಿತ್ತ ಸಚಿವರಾಗಿ ನೇಮಿಸಲಾಗಿದೆ. ಹಾಲಿ ವಿತ್ತ ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಧಾನಿಯಾಗಿ ನೇಮಕಗೊಂಡ ಬಳಿಕ ಡೌನಿಂಗ್  ಸ್ಟ್ರೀಟ್‌ನಲ್ಲಿರುವ ತನ್ನ ಕಾರ್ಯಾಲಯದ ಮುಂಭಾಗದ  ಲ್ಲಿ ಭಾಷಣ ಮಾಡಿದ ಸುನಾಕ್ ಅವರು ಆರ್ಥಿಕ ಸ್ಥಿರತೆ ಹಾೂ ಆತ್ಮವಿಶ್ವಾಸವು ಈ ಸರಕಾರದ ಕಾರ್ಯಸೂಚಿಯ ಹೃದಯವಾಗಲಿದೆ’’ ಎಂದರು.

 ದೇಶದಲ್ಲಿ ಗಗನಕ್ಕೇರಿರುವ ಇಂಧನ ದರ ಹಾಗೂ ಆಹಾರ ದರಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿರುವುದು ತನಗೆ ಅರಿವಿದೆ ಎಂದರು. ನಾನು ಸ್ವೀಕರಿಸಿರುವ ಈ ಉನ್ನತ ಹುದ್ದೆಯ ಹೊಣೆಗಾರಿಕೆಯ ಬಗ್ಗೆ ನನಗೆ ಅರಿವಿದೆ ಹಾಗೂ ನಾನು ಜನತೆಯ ಬೇಡಿಕೆಗಳಿಗೆ ಸ್ಪಂದಿಸಲಿದ್ದೇನೆ’’ ಎಂದು ಸುನಾಕ್ ಭರವಸೆ ನೀಡಿದರು.

ಪ್ರಸಕ್ತ ಬ್ರಿಟನ್ ತೀವ್ರವಾದ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ದೇಶದಲ್ಲಿ ಕುಸಿದುಬಿದ್ದಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ಕನ್ಸರ್ವೇಟಿವ್ ಪಕ್ಷ ವಿಫಲವಾಗಿದೆಯೆಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News