ಚೀನಾ ಗಡಿಯಲ್ಲಿ ಅಮೆರಿಕ ಜತೆ ಸೇನಾ ಅಭ್ಯಾಸಕ್ಕೆ ಭಾರತ ಚಿಂತನೆ: ಉನ್ನತ ಅಧಿಕಾರಿ

Update: 2022-10-27 03:07 GMT

ಹೊಸದಿಲ್ಲಿ: ಭಾರತ ಈ ವರ್ಷದ ಕೊನೆಯ ಒಳಗಾಗಿ ಹಲವು ಮಿತ್ರ ರಾಷ್ಟ್ರಗಳ ಜತೆ ಜಂಟಿ ಸಮರಾಭ್ಯಾಸ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಇದರಲ್ಲಿ ಜಪಾನ್ ಜತೆ ನಡೆಸಲು ಉದ್ದೇಶಿಸಿರುವ ಮಲಬಾರ್ ಕ್ವಾರ್ಡಿಲೆಟರಲ್ ವಾರ್‍ಗೇಮ್ಸ್ (Malabar quadrilateral naval wargames), ಆಸ್ಟ್ರೇಲಿಯಾ ಹಾಗೂ ಮೂರು ಏಷ್ಯನ್ ದೇಶಗಳ ಜತೆಗೆ ಇನ್‍ಫ್ಯಾಂಟ್ರಿ ಅಭ್ಯಾಸ ಮತ್ತು ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ ಬಳಿ ಅಮೆರಿಕ ಜತೆಗೆ ಅತಿ ಎತ್ತರದ ಯುದ್ಧ ಕ್ಷೇತ್ರಗಳಲ್ಲಿನ ಸಮರಾಭ್ಯಾಸ ಸೇರಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ timesofindia.com ವರದಿ ಮಾಡಿದೆ.

ಯುದ್ಧನೌಕೆಗಳು, ಸಬ್‍ಮೆರಿನ್‍ಗಳು, ಯುದ್ಧವಿಮಾನಗಳು, ವಿಮಾನ ಹಾಗೂ ಹೆಲಿಕಾಪ್ಟರ್‍ಗಳನ್ನು ಭಾರತ ನಿಯೋಜಿಸಲಿದ್ದು, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಜತೆ ಜಪಾನ್‍ನ ಯೊಕೊಸುಕಾದಲ್ಲಿ ನವೆಂಬರ್ 8ರಿಂದ 18ರ ವರೆಗೆ ಮಲಬಾರ್ ಸಮರಾಭ್ಯಾಸ ಆಯೋಜಿಸಲಾಗಿದೆ. ನಾಲ್ಕು ಕ್ವಾಡ್ ಸದಸ್ಯ ದೇಶಗಳ ಜತೆಗೆ ನಡೆಸುವ ಈ ಸಮರಾಭ್ಯಾಸ ಭಾರತ- ಫೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ವಿಸ್ತರಣಾ ನೀತಿಯ ಕಾರಣದಿಂದ ನಡೆಯಬಹುದಾದ ಯಾವುದೇ ಬಲಪ್ರಯೋಗವನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾ ನಡುವೆ ಮಾಡಿಕೊಂಡಿರುವ ಕ್ವಾಡ್ ಮತ್ತು ಎಯುಕೆಯುಎಸ್ (Quad and AUKUS) ಪ್ರಾಂತೀಯ ಒಪ್ಪಂದದ ಪ್ರಕಾರ, ಕ್ಯಾಬ್‍ಬೆರ್ರಾ ಅಣ್ವಸ್ತ್ರ ಸಬ್‍ಮೆರಿನ್‍ಗಳನ್ನು ಖರೀದಿಸಲು ನೆರವಾಗಲಿದೆ.

ಭಾರತ ಹಾಗೂ ಅಮೆರಿಕ ಸೇನೆಗಳ ನಡುವಿನ ಬೆಟಾಲಿಯನ್ ಮಟ್ಟದ 'ಯುದ್ಧ ಅಭ್ಯಾಸ' ಕಾರ್ಯಾಚರಣೆ ಉತ್ತರಾಖಂಡದ ಔಲಿ ಪ್ರದೇಶದಲ್ಲಿ ನಡೆಯಲಿದ್ದು, ಇದು ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯಿಂದ ಕೇವಲ 100 ಕಿಲೋಮೀಟರ್ ದೂರದಲ್ಲಿ ನವೆಂಬರ್ 15ರಿಂದ ಡಿಸೆಂಬರ್ 2ರವರೆಗೆ ಆಯೋಜನೆಯಾಗಿದೆ.

ಉಭಯ ದೇಶಗಳ ತಲಾ 350 ಸೈನಿಕರು ಯುದ್ಧ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದು, ಪರ್ವತ ಪ್ರದೇಶ, ತೀರಾ ಚಳಿ ಹವಾಮಾನ, ಹೆಲಿಬ್ರೋನ್ ಅಂಶಗಳು ಮತ್ತು ಸಮಗ್ರ ಕಣ್ಗಾವಲು ಗ್ರಿಡ್ ಅಭ್ಯಾಸಗಳು ನಡೆಯಲಿವೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News