ಅಮೆರಿಕ: ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಮೃತ್ಯು, ಐವರಿಗೆ ಗಂಭೀರ ಗಾಯ

Update: 2022-10-27 08:58 GMT

ವಿಜಯವಾಡ: ಅಮೆರಿಕದ ನ್ಯೂ ಹೆವೆನ್ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಮಂಗಳವಾರ ನಡೆದಿದ್ದು, ಮೃತಪಟ್ಟ ವಿದ್ಯಾರ್ಥಿಗಳು ಆಂಧ್ರ ಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana) ಮೂಲದವರು ಎಂದು timesofindia ವರದಿ ಮಾಡಿದೆ.

ಮಿನಿವ್ಯಾನ್ ಮತ್ತು ಕಾರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಮಿನಿವ್ಯಾನ್ ನಲ್ಲಿ 7 ಮಂದಿ ಹಾಗೂ ಕಾರಿನಲ್ಲಿ ಮೂವರು ಇದ್ದರು ಎನ್ನಲಾಗಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ಗೋಡ ಪ್ರೇಮ್ ಕುಮಾರ್ ರೆಡ್ಡಿ (26), ಗುಲ್ಲಪೆಲ್ಲಿ ಪವಣಿ(22), ಸಾಯಿ ನರಸಿಂಹ (23) ಎಂದು ಗುರುತಿಸಲಾಗಿದೆ.

ಮೃತಪಟ್ಟ ವಿದ್ಯಾರ್ಥಿಗಳ ಪೈಕಿ ಇಬ್ಬರು ತೆಲಂಗಾಣ, ಮತ್ತೊಬ್ಬರು ಆಂಧ್ರ ಪ್ರದೇಶದವರು. ಅವರು ಅಮೆರಿಕದ ನ್ಯೂಹೆವನ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವಿದ್ಯಾರ್ಥಿಗಳಾಗಿದ್ದಾರೆ.

ಮೂಲಗಳ ಪ್ರಕಾರ ದಟ್ಟ ಮಂಜು ಇದ್ದ ಕಾರಣ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ.

ಸದ್ಯ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ನ. 11ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

Similar News