ವಡೋದರಾದಲ್ಲಿ ತಲೆಯೆತ್ತಲಿರುವ ಏರ್‌ಬಸ್ ವಿಮಾನ ತಯಾರಿಕೆ ಘಟಕ
Update: 2022-10-27 20:36 IST
ಹೊಸದಿಲ್ಲಿ,ಅ.27: ಏರ್‌ಬಸ್ ಸಿ-295 ಸಾರಿಗೆ ವಿಮಾನದ ತಯಾರಿಕೆ ಘಟಕವು ಗುಜರಾತಿನ ವಡೋದರಾದಲ್ಲಿ ಸ್ಥಾಪನೆಯಾಗಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಅಜಯಕುಮಾರ ಅವರು ಗುರುವಾರ ಇಲ್ಲಿ ತಿಳಿಸಿದರು. ಅ.30ರಂದು ಕಾರ್ಖಾನೆಗೆ ಶಿಲಾನ್ಯಾಸ ನೆರವೇರಲಿದ್ದು,ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಸಿ-295 ವಿಮಾನವು ಯುರೋಪ್ ನಿಂದ ಹೊರಗೆ ತಯಾರಾಗಲಿದೆ ಎಂದರು.
ಭಾರತವು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಭಾರತೀಯ ವಾಯುಪಡೆಯ ಹಳೆಯ ಆವ್ರೋ-748 ವಿಮಾನಗಳ ಸ್ಥಾನದಲ್ಲಿ 56 ಸಿ-295 ಸಾರಿಗೆ ವಿಮಾನಗಳ ಖರೀದಿಗಾಗಿ ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಜೊತೆ ಸುಮಾರು 21,000 ಕೋ.ರೂ.ಗಳ ಒಪ್ಪಂದಕ್ಕೆ ಸಹಿಹಾಕಿತ್ತು. ಈ ಒಪ್ಪಂದದಡಿ ಭಾರತದಲ್ಲಿ ಮಿಲಿಟರಿ ವಿಮಾನಗಳ ತಯಾರಿಕೆಗಾಗಿ ಮೊದಲ ಬಾರಿಗೆ ಖಾಸಗಿ ಕಂಪನಿಗೆ ಅವಕಾಶ ನೀಡಲಾಗಿದೆ