ಸಾಮೂಹಿಕ ಅತ್ಯಾಚಾರ ಪ್ರಕರಣ: ಸಚಿವರ ಪುತ್ರನ ವಿರುದ್ಧದ ಆರೋಪ ರಾಜಕೀಯ ಪ್ರೇರಿತ; ಬಿಜೆಪಿ

Update: 2022-10-27 16:36 GMT

ಅಗರ್ತಲ, ಅ. 27:  ರಾಜ್ಯ ಸಚಿವರ ಪುತ್ರನ ವಿರುದ್ಧದ ಸಾಮೂಹಿಕ ಅತ್ಯಾಚಾರದ ಆರೋಪ ರಾಜಕೀಯ ಪ್ರೇರಿತ ಎಂದು ತ್ರಿಪುರಾ ಬಿಜೆಪಿ ಬುಧವಾರ ಪ್ರತಿಪಾದಿಸಿದೆ. 

ಉನಕೋಟಿ ಜಿಲ್ಲೆಯ ಕುಮಾರಘಾಟ್ ಪಟ್ಟಣದಲ್ಲಿರುವ ಮೂರು ಮಹಡಿಯ ಕಟ್ಟಡದಲ್ಲಿ ಅಕ್ಟೋಬರ್ 19ರಂದು 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಒಂದು ದಿನದ ಬಳಿಕ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು. 

ಈ ಸಾಮೂಹಿಕ ಅತ್ಯಾಚಾರದಲ್ಲಿ ಬಿಜೆಪಿ ನಾಯಕ ಹಾಗೂ ರಾಜ್ಯ ಕಾರ್ಮಿಕ ಸಚಿವ ಭಗವಾನ್ ದಾಸ್ ಅವರ ಪುತ್ರ ಭಾಗಿಯಾಗಿದ್ದಾನೆ ಎಂದು ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. 
ಆದರೆ, ಪ್ರಕರಣದಲ್ಲಿ ಬಿಜೆಪಿ ನಾಯಕನ ಪುತ್ರ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿಲ್ಲ ಎಂದು ರಾಜ್ಯ ಮಾಹಿತಿ ಹಾಗೂ ಸಂಸ್ಕೃತಿ ವ್ಯವಹಾರಗಳ ಸಚಿವ ಸುಶಾಂತ ಚೌಧುರಿ ಬುಧವಾರ ತಿಳಿಸಿದ್ದಾರೆ. ಸ್ಥಾಪಿತ ಹಿತಾಸಕ್ತಿ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈ ಆರೋಪ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.  

ರಾಜ್ಯ ಕಾರ್ಮಿಕ ಸಚಿವರ ಪುತ್ರ ಅಕ್ಟೋಬರ್ 10ರಿಂದ ಪಟ್ಟಣದಲ್ಲಿರಲಿಲ್ಲ   ಎಂದು ಚೌಧುರಿ ಪ್ರತಿಪಾದಿಸಿದ್ದಾರೆ. ‘‘ನಾವು ಮಹಿಳೆಯ ಮೇಲಿನ ಅಪರಾಧಗಳೊಂದಿಗೆ ರಾಜಿ ಮಾಡಿ ಕೊಳ್ಳುವ ಈ ಹಿಂದಿನ ಎಡರಂಗ ಸರಕಾರದಂತೆ ಅಲ್ಲ. ನಮ್ಮ ಸರಕಾರ ಮಹಿಳಾ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ. 

ಸಬ್ಸಿಡಿ ಸಹಿತ ಪಡಿತರ ಹಾಗೂ ವಸತಿ ಸೌಲಭ್ಯ ಒದಗಿಸುವಂತಹ ಹಲವು ಜನಪರ ಚಟುವಟಿಕೆಗಳಲ್ಲಿ ಬಿಜೆಪಿ ತೊಡಗಿಸಿಕೊಂಡಿರುವುದರಿAದ ಪ್ರತಿಪಕ್ಷ ಹತಾಶಗೊಂಡಿದೆ ಎಂದು ಚೌಧುರಿ ಆರೋಪಿಸಿದ್ದಾರೆ.  

Similar News