ಅಸೆಂಬ್ಲಿ ಚುನಾವಣೆಗೂ ಮುನ್ನ ಏಕರೂಪಿ ನಾಗರಿಕೆ ಸಂಹಿತೆ ಜಾರಿಗೆ: ಗುಜರಾತ್‌ ಗೃಹ ಸಚಿವ

Update: 2022-10-29 12:26 GMT

ಅಹಮದಾಬಾದ್: ವಿಧಾನಸಭೆ ಚುನಾವಣೆಗೆ ಮುನ್ನ ಗುಜರಾತ್ ಕ್ಯಾಬಿನೆಟ್ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ನಿರ್ಧರಿಸಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಶನಿವಾರ ಹೇಳಿದ್ದಾರೆ.

ಗಾಂಧಿನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದ ಕೇಂದ್ರ ಮೀನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ, “ರಾಮ ಜನ್ಮಭೂಮಿಗಾಗಿ, ಆರ್ಟಿಕಲ್ 370 ಮತ್ತು ಯುಸಿಸಿ (ರದ್ದತಿ) ಗಾಗಿ ನಾವು ನಮ್ಮ ಯೌವನದ ದಿನಗಳಿಂದ ಬೇಡಿಕೆಗಳನ್ನು ಮಾಡುತ್ತಿದ್ದೇವೆ. ಬಿಜೆಪಿಯ ಹಳೆಯ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ನೀವು ಮುಂದಿನ ಹೆಜ್ಜೆ ಇಟ್ಟಿದ್ದೀರಿ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಅಭಿನಂದಿಸುತ್ತೇನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ. ರಾಮಮಂದಿರ ಮತ್ತು ಕಾಶ್ಮೀರದಂತೆ, ಈ ಸಮಸ್ಯೆಯನ್ನು (ಯುಸಿಸಿ) ಗುಜರಾತ್ ಸರ್ಕಾರವು (ಸಚಿವ ಸಂಪುಟದಲ್ಲಿ) ಅಂಗೀಕರಿಸಿದೆ. ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು ಮತ್ತು ಅದರ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಈ ಕಾನೂನನ್ನು ಜಾರಿಗೆ ತರಲು ಹಾದಿ ಸುಗಮವಾಗುತ್ತದೆ” ಎಂದು ಹೇಳಿದ್ದಾರೆ. 

''ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಸಂಪುಟವು ಮುಖ್ಯಮಂತ್ರಿಗೆ ಸಮಿತಿಯನ್ನು ರಚಿಸುವ ಹಕ್ಕನ್ನು ನೀಡಿದ್ದು, ಮೂರರಿಂದ ನಾಲ್ಕು ಸದಸ್ಯರನ್ನು ಒಳಗೊಂಡಿರುವ ಸಮಿತಿ ರಚನೆಯ ನಿರೀಕ್ಷೆಯಿದೆ, ಅದರ ಕಾರ್ಯದ ವ್ಯಾಪ್ತಿಯನ್ನು ಸಹ ನಿರ್ಧರಿಸಲಾಗುತ್ತದೆ” ಎಂದು ರೂಪಲಾ ಹೇಳಿದರು.

Similar News