ಬ್ರಿಟನ್: ವಿದೇಶಿ ನೆರವಿನ ಬಜೆಟ್ ಸ್ಥಗಿತವನ್ನು ಇನ್ನೂ ಎರಡು ವರ್ಷ ವಿಸ್ತರಿಸಲು ಸುನಕ್ ನಿರ್ಧಾರ?‌

Update: 2022-10-29 16:11 GMT

 ಲಂಡನ್,ಅ.29: ಬ್ರಿಟನ್‌ನ ನೂತನ ಪ್ರಧಾನಿ ರಿಶಿ ಸುನಾಕ್(Rishi Sunak) ಅವರು ದೇಶದ ವಿದೇಶಿ ನೆರವಿನ ಬಜೆಟ್ ಅನ್ನು ಹೆಚ್ಚುವರಿ ಎರಡು ವರ್ಷಗಳವರೆಗೆ ಸ್ಥಗಿತಗೊಳಿಸುವ ಬಗ್ಗೆ ಪರಿಶೀಲಿಸುತ್ತಿದ್ದಾರೆಂದು ಟೆಲಿಗ್ರಾಫ್ ಪತ್ರಿಕೆ (The Telegraph newspaper)ಶುಕ್ರವಾರ ವರದಿ ಮಾಡಿದೆ.

    ಬ್ರಿಟನ್ ತನ್ನ ರಾಷ್ಟ್ರೀಯ ಆದಾಯದ ಶೇ.0.5 ಅನ್ನು ವಿದೇಶಿ ನೆರವಿಗಾಗಿ ಖರ್ಚು ಮಾಡುತ್ತಿದೆ. ಆದರೆ ಕೊರೊನ ವೈರಸ್‌ನ ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಬ್ರಿಟಿಶ್ ಸರಕಾರವು 2025ರವರೆಗೆ ವಿದೇಶಗಳಿಗೆ ನೆರವು ನೀಡುವುದಕ್ಕಾಗಿ ನೆರವಿಗಾಗಿ ಖರ್ಚು ಮಾಡುವುದನ್ನು ಕಡಿತಗೊಳಿಸಿತ್ತು.

  ಇದೀಗ ಹೆಚ್ಚುವರಿಯಾಗಿ ಇನ್ನೂ ಎರಡು ವರ್ಷಗಳಿಗೆ ಅಂದರೆ 2026-27ರವರೆ ವಿದೇಶಿ ನೆರವನ್ನು ಕಡಿತಗೊಳಿಸಲು ಸುನಾಕ್ ಸರಕಾರ ನಿರ್ಧರಿಸಿದೆಯೆಂದು ಟೆಲಿಗ್ರಾಫ್ ವರದಿ ತಿಳಿಸಿದೆ.

Similar News