×
Ad

ಕ್ರಿಮಿಯಾದಲ್ಲಿ ನಡೆದ ಡ್ರೋನ್ ದಾಳಿಯ ಹಿಂದೆ ಬ್ರಿಟಿಶ್ ಸೇನೆಯ ಕೈವಾಡ : ರಶ್ಯ ಆರೋಪ

Update: 2022-10-29 21:50 IST

    ಮಾಸ್ಕೊ,ಆ.29: ಕ್ರಿಮಿಯಾದಲ್ಲಿನ ತನ್ನ ನೌಕಾದಳದ ಹಡಗುಗಳ ಸಮೂಹವಾದ ‘ಬ್ಲಾಕ್ ಸೀ ಫ್ಲೀಟ್’(Black Sea Fleet) ಮೇಲೆ ಉಕ್ರೇನ್ ಬೃಹತ್ ಪ್ರಮಾಣದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಬ್ರಿಟನ್‌ನ ಸೇನಾ ತಜ್ಞರು ಶಾಮೀಲಾಗಿದ್ದಾರೆಂದು ರಶ್ಯ ಆರೋಪಿಸಿದೆ. ಆದರೆ ಈ ಆರೋಪವನ್ನು ಬ್ರಿಟನ್ ನಿರಾಕರಿಸಿದೆ.

     ರಶ್ಯದ ಸ್ವಾಧೀನದಲ್ಲಿರುವ ಕ್ರಿಮಿಯಾ ಪ್ರಾಂತದಲ್ಲಿರುವ ಸೆವಾಸ್ಟೊಪೊಲ್ (Sevastopol)ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ಸೇನೆಯಿಂದ ದಾಳಿಗೆ ಒಳಗಾಗಿದೆ. ಈ ನೌಕಾನೆಲೆಯು ಬ್ಲಾಕ್ ಸೀ ಫ್ಲೀಟ್‌ನ ಮುಖ್ಯ ಕಾರ್ಯಾಲಯವಾಗಿದೆ ಹಾಗೂ ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಸೇನಾಕ್ರಮಣದ ವ್ಯೆಹಾತ್ಮಕವಾದ ಕೇಂದ್ರವಾಗಿದೆ.

 ದಕ್ಷಿಣ ಉಕ್ರೇನ್‌ನ ನಗರ ಒಚಾಕಿವ್‌ನಲ್ಲಿ ಬೀಡುಬಿಟ್ಟಿರುವ ಬ್ರಿಟನ್‌ನ ವಿಶೇಷ ತಜ್ಞರು ರಶ್ಯ ಸೇನೆಯ ಮೇಲೆ ದಾಳಿ ನಡೆಸುವುದಕ್ಕೆ ಉಕ್ರೇನ್ ಸೈನಿಕರನ್ನು ಸಜ್ಜುಗೊಳಿಸುತ್ತಿದ್ದಾರೆ ಹಾಗೂ ಅವರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಮಾಸ್ಕೋ ಆರೋಪಿಸಿದೆ.

ಇದೇ ಬ್ರಿಟಿಶ್ ತಂತ್ರಜ್ಞರ ಘಟಕವು ಕಳೆದ ತಿಂಗಳು ನಾರ್ಡ್ ಸ್ಟ್ರೀಮ್‌ನಲ್ಲಿರುವ ಅನಿಲ ಕೊಳವೆಮಾರ್ಗಗಳ ಸ್ಫೋಟದಲ್ಲೂ ಶಾಮೀಲಾಗಿದ್ದಾರೆಂದು ರಶ್ಯನ್ ಸೇನೆ ಆಪಾದಿಸಿದೆ.

 ಉಕ್ರೇನ್‌ನಲ್ಲಿ ಉತ್ಪಾದನೆಯಾದ ಧವಸಧಾನ್ಯಗಳ ರಫ್ತಿಗೆ ಅವಕಾಶ ನೀಡುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಂಧಾನದೊಂದಿಗೆ ಏರ್ಪಡಿಸಲಾದ ಒಪ್ಪಂದದಡಿ ದಾಳಿಗೊಳಗಾದ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಮಾಸ್ಕೋ ಸೇನೆ ಆರೋಪಿಸಿದೆ.

Similar News