×
Ad

ಪುನೀತ್‌ ರಾಜ್‌ ಕುಮಾರ್‌ ಪ್ರಥಮ ವರ್ಷದ ಪುಣ್ಯಸ್ಮರಣೆ: ಉದ್ಯಾವರದಲ್ಲಿ ಅಂಧರ ಗೀತ ಗಾಯನ

Update: 2022-10-29 23:17 IST

ಉದ್ಯಾವರ : ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ರವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉದ್ಯಾವರದಲ್ಲಿ ಅಂಧರ ಗೀತ ಗಾಯನ ನಡೆಯಿತು.

ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದ ಕಲಾವಿದರನ್ನು ಆಹ್ವಾನಿಸಿದ ಸಾಕಷ್ಟು ಸಮಾಜಮುಖೀ ಚಟುವಟಿಕೆ ನಿರತ ಗುಡ್ಡೆಯಂಗಡಿ ಫ್ರೆಂಡ್ಸ್‌  ಗುಡ್ಡೆಯಂಗಡಿ ವತಿಯಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಶನಿವಾರ ಸಂಜೆ  ಉದ್ಯಾವರ ಗುಡ್ಡೆಯಂಗಡಿ ಇಮೇಜ್‌ ಬಿಲ್ಡಿಂಗ್‌ ಮುಂಭಾಗದಲ್ಲಿ ನಡೆಯಿತು.

ಉಡುಪಿ ಉದ್ಯಾವರ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹವಾ ಇದ್ದು, ಪ್ರಕರಣವನ್ನು ಗುಡ್ಡೆಯಂಗಡಿ ಸಂಸ್ಥೆಯ ವತಿಯಿಂದ ಪ್ರಥಮ ವರ್ಷದ ಸ್ಮರಣೆ ನಡೆಸಿದ ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಯಿತು.

ಗುಡ್ಡೆಯಂಗಡಿ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಸಾಲ್ಯಾನ್ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕ ರಿಯಾಝ್ ಪಳ್ಳಿ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕಷ್ಣ ಶ್ರೀಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್, ದಿವಾಕರ ಬೊಳ್ಜೆ, ಫ್ರೀಡಾ ಡಿಸೋಜ, ಗಿರೀಶ್ ಸುವರ್ಣ, ಜುಡಿತ್ ಪಿರೇರಾ, ವನಿತಾ ಶೆಟ್ಟಿ, ಗುಡ್ಡೆಯಂಗಡಿ ಫ್ರೆಂಡ್ಸ್ ಪ್ರಮುಖರಾದ ಗಿರೀಶ್ ಕುಮಾರ್, ಲಕ್ಷ್ಮಣ ಸಂಪಿಗೆನಗರ, ರೋಯ್ಸ್ ಫೆರ್ನಾಂಡಿಸ್, ಸತೀಶ್ ಬೀರಪ್ಪಾಡಿ, ಕಿಶೋರ್, ಉದಯ, ಸುಧಾಕರ ಮತ್ತಿತ್ತರು ಉಪಸ್ಥಿತರಿದ್ದರು.

Similar News