ಉಡುಪಿ: ನ.4ರಿಂದ ‘ದಿವ್ಯಕಲಾ’ ಕಲಾ ಪ್ರದರ್ಶನ
Update: 2022-10-31 22:52 IST
ಉಡುಪಿ: ಕಲಾವಿದ ದೃಢ ವೃತ ಗೋರಿಕ್ ಅವರ ದಿವ್ಯಕಲಾ- ಕಲಾ ಪ್ರದರ್ಶನವು ನ.4, 5 ಮತ್ತು 6ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಉಡುಪಿ ಕುಂಜಿಬೆಟ್ಟುವಿನ ಅದಿತಿ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಗ್ಯಾಲರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ, ಅಮೆರಿಕದಲ್ಲಿ ಹುಟ್ಟಿ ಬೆಳೆದ ಗೋರಿಕ್, ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಕಲೆಗಳಲ್ಲಿ ತರಬೇತಿ ಪಡೆದ ಕಲಾವಿದರಾಗಿದ್ದಾರೆ. ಈ ಪ್ರದರ್ಶನದಲ್ಲಿ ಒಟ್ಟು 32 ಕಲಾಕೃತಿಗಳನ್ನು ಪ್ರದರ್ಶಿಸ ಲಾಗುವುದು.
ಶಾಸ್ತ್ರೋಸ್ತವಾಗಿ ರಚಿಸಲಾದ ವಾಸ್ತು ಪುರುಷ, ನವಗ್ರಹ, ನಟರಾಜ, ನರಸಿಂಹನ ಅವತಾರಗಳ ಕಲಾಕೃತಿಗಳು ಇಲ್ಲಿವೆ ಎಂದರು.