ನೂತನ ಅಧ್ಯಕ್ಷರಾಗಿ ಎಸ್.ಹಸನಬ್ಬ ಗುಡ್ಡೆಮನೆ ಆಯ್ಕೆ

ಫರಂಗಿಪೇಟೆ ಮದ್ರಸ ಮ್ಯಾನೇಜ್ ಮೆಂಟ್ ಅಸ್ತಿತ್ವಕ್ಕೆ

Update: 2022-11-01 09:21 GMT

ಬಂಟ್ವಾಳ, ನ.1: ನೂತನವಾಗಿ ಅಸ್ತಿತ್ವಕ್ಕೆ ಬಂದ ಫರಂಗಿಪೇಟೆ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಇದರ ಮಹಾ ಸಭೆಯು ಮಿತ್ತಬೈಲ್ ರೇಂಜ್ ಮ್ಯಾನೇಜ್ ಮೆಂಟ್ ಇದರ ಅಧ್ಯಕ್ಷ ಯೂಸುಫ್ ಬದ್ರಿಯಾ ಅವರ ಅಧ್ಯಕ್ಷತೆಯಲ್ಲಿ ಫರಂಗಿಪೇಟೆ ಇಸ್ಲಾಹುಲ್ ಮುಸ್ಲಿಮೀನ್ ಮದರಸದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಮಹಾ ಸಭೆಯಲ್ಲಿ 2022 - 25ರ ಫರಂಗಿಪೇಟೆ ರೇಂಜ್ ಮ್ಯಾನೇಜ್ ಮೆಂಟ್ ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಸ್.ಹಸನಬ್ಬ ಗುಡ್ಡೆಮನೆ, ಉಪಾಧ್ಯಕ್ಷರಾಗಿ ಮುಹಮ್ಮದ್ ಬುಖಾರಿ, ಅಶ್ರಫ್ ಕುಂಜತ್ಕಲ, ಕಾರ್ಯದರ್ಶಿ ಸಲೀಂ ಕುಂಪನಮಜಲ್, ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಮಾರಿಪಳ್ಳ, ಅಬ್ದುಲ್ ಮಜೀದ್ ಅವರನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿ ಯೂಸುಫ್ ಅಲಂಕಾರ್, ಪತ್ರಿಕಾ ಕಾರ್ಯದರ್ಶಿ ಬಶೀರ್ ತಂಡೇಲ್ ಅಮ್ಮೆಮ್ಮಾರ್, ಜಿಲ್ಲಾ ಪ್ರತಿನಿಧಿಗಳಾಗಿ ಹಾಜಿ‌ ಉಮರಬ್ಬ ಅಮ್ಮೆಮ್ಮಾರ್, ರಮ್ಲಾನ್ ಮಾರಿಪಳ್ಳ ಹಾಗೂ ಇತರ ಸದಸ್ಯರನ್ನು ಆಯ್ಕೆಯಾದರು.

ಕಾರ್ಯಕ್ರಮವನ್ನು ಫರಂಗಿಪೇಟೆ ಜುಮಾ ಮಸೀದಿ ಖತೀಬರಾದ ಅಬ್ಬಾಸ್ ದಾರಿಮಿ ಅವರು ದುಅ ಗೈದು ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಉಮರ್ ಫಾರೂಕ್, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಸ್ಮಾಯೀಲ್ ಹನೀಫ್, ಪ್ರಧಾನ ಕಾರ್ಯದರ್ಶಿ ಅಬೂ ಉವೈಸಿ ಅಸ್ಲಾಂ, ಕೋಶಾಧಿಕಾರಿ ಯೂಸುಫ್ ಅಲಂಕಾರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಉಪಸ್ಥಿತರಿದ್ದರು.

ಚುನಾವಣಾ ಅಧಿಕಾರಿಯಾಗಿ ಹಮೀದ್ ಕರಾವಳಿ ಉಪ್ಪಿನಂಗಡಿ, ವೀಕ್ಷಕರಾಗಿ ಮುಹಮ್ಮದ್ ಅಶ್ರಫ್ ಕಾರ್ಯನಿರ್ವಹಿಸಿದರು. ಮಿತ್ತಬೈಲ್ ರೇಂಜ್ ಕಾರ್ಯದರ್ಶಿ ಇಕ್ಬಾಲ್ ನಂದರ ಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

Similar News