ಉಪ್ಪಿನಂಗಡಿ: ಕೆರೆಗೆ ಹಾರಿ ವೃದ್ಧೆ ಆತ್ಮಹತ್ಯೆ
Update: 2022-11-01 15:13 IST
ಉಪ್ಪಿನಂಗಡಿ,ನ.1: ವೃದ್ಧೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಅಮ್ಟಂಗೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಅಮ್ಟಂಗೆ ನಿವಾಸಿ ದಿ. ರಾಮಣ್ಣ ಗೌಡರ ಪತ್ನಿ ಜಾನಕಿ (60) ಮೃತ ವೃದ್ಧೆ. ಮನೆಯಲ್ಲಿ ಇವರು ಹಾಗೂ ಇವರ ಪುತ್ರ ಮಾತ್ರ ಇದ್ದು, ಪುತ್ರ ನಿನ್ನೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ರಾತ್ರಿ ಮನೆಗೆ ಬಂದಾಗಲೂ ಇವರಿರಲಿಲ್ಲ. ಒಮ್ಮೊಮ್ಮೆ ಇವರು ಹೇಳದೆ ಪುತ್ರಿಯ ಮನೆಗೆ ಹೋಗುವ ಅಭ್ಯಾಸವಿದ್ದು, ಹಾಗೇ ಹೋಗಿರಬಹುದೆಂದು ಸುಮ್ಮನಿದ್ದೆ, ಆದರೆ ಬೆಳಗ್ಗೆ ನೋಡುವಾಗ ಮನೆಯ ತೋಟದ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿರುವುದಾಗಿ ಪುತ್ರ ಲಕ್ಷ್ಮೀಶ ಗೌಡ ಪೊಲೀಸ್ ದೂರನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಇವರ ಪುತ್ರ ಲಕ್ಷ್ಮೀಶ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.