ವಿಶ್ವಸಂಸ್ಥೆ ನೇತೃತ್ವದ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸುನಾಕ್ ನಿರ್ಧಾರ

Update: 2022-11-02 17:22 GMT

 ಲಂಡನ್, ನ.2: ಮುಂದಿನ ವಾರ ಈಜಿಪ್ಟ್ನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆಯಲಿರುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್(Rishi Sunak) ಘೋಷಿಸಿದ್ದಾರೆ.

 ಸುನಾಕ್ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ ಎಂದು ಪ್ರಧಾನಿಯ ಕಚೇರಿ ಮಂಗಳವಾರ ಹೇಳಿಕೆ ನೀಡಿತ್ತು. ‘ಹವಾಮಾನ ಬದಲಾವಣೆ ಸಮಸ್ಯೆ(Climate change is a problem) ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ದೀರ್ಘಾವಧಿಯ ಸಮೃದ್ಧಿ ಸಾಧ್ಯವಿಲ್ಲ. ನವೀಕರಿಸಬಹುದಾದ ಶಕ್ತಿಗಳಲ್ಲಿ ಹೂಡಿಕೆ ಮಾಡದಿದ್ದರೆ ಇಂಧನ ಭದ್ರತೆ ಸಾಧ್ಯವಿಲ್ಲ. ಆದ್ದರಿಂದ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಗ್ಲಾಸ್ಗೋ ಸಮ್ಮೇಳನದ ಧ್ಯೇಯವನ್ನು ತಲುಪಿಸಲು ಸಿಒಪಿ27 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ’ ಎಂದು ಸುನಾಕ್ ಟ್ವೀಟ್ ಮಾಡಿದ್ದಾರೆ.

Similar News