ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಬಂಧನ

Update: 2022-11-03 12:21 GMT

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರು ಇಂದು ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಯೊಬ್ಬ ಖಾನ್‌ ಅವರ ಕಾಲಿಗೆ ಗುಂಡು ಹಾರಿಸಿದ್ದಾನೆನ್ನಲಾಗಿದ್ದು ಅವರ ಜೀವಕ್ಕೇನೂ ಅಪಾಯವಿಲ್ಲ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಇತರ ಹಲವಾರು ಮಂದಿಗೆ ಗಾಯಗಳುಂಟಾಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಮ್ರಾನ್‌ ಖಾನ್‌ ಅವರ ಪಕ್ಷ, "ಇದು ಅವರ ಹತ್ಯೆಗೆ ನಡೆದ ಯತ್ನ" ಎಂದು ಹೇಳಿದೆ.

ಕಳೆದ ಶುಕ್ರವಾರ ಲಾಹೋರ್‌ನಿಂದ ಆರಂಭಗೊಂಡ ರೋಡ್‌ ಶೋ ಭಾಗವಾಗಿ ಇಂದು ಇಸ್ಲಾಮಾಬಾದ್‌ನತ್ತ ಖಾನ್‌ ಅವರು ಲಾರಿಯೊಂದರಲ್ಲಿ ತೆರಳುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ಅವರನ್ನು ತಕ್ಷಣ ಇನ್ನೊಂದು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅವರ ಮೇಲೆ ದಾಳಿ ನಡೆಸಿದ ಬಂದೂಕುಧಾರಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಗುಜ್ರಾನ್‌ವಾಲಾದ ರ್ಯಾಲಿ ಮೇಲೆ ಗುಂಡಿನ ದಾಳಿ; ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಗಾಯ

Similar News