×
Ad

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ: ಘಟನೆಯ ವರದಿ ಕೇಳಿದ ಪ್ರಧಾನಿ ಶೆಹಬಾಝ್‌ ಷರೀಫ್

Update: 2022-11-03 18:14 IST

ಇಸ್ಲಾಮಾಬಾದ್:‌ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬಲಗಾಲಿಗೆ ಬ್ಯಾಂಡೇಜ್ ಹಾಕಲಾಗಿದೆ. ಈ ದಾಳಿಯನ್ನು ಇಮ್ರಾನ್‌ ಖಾನ್‌ ಅವರ ಪಕ್ಷವು ʼಹತ್ಯೆಯ ಪ್ರಯತ್ನʼ ಎಂದು ಕರೆದಿದೆ.

ಸೇನೆ ವಿಶ್ವಾಸವನ್ನು ಕಳೆದುಕೊಂಡು ಇಮ್ರಾನ್‌ ಖಾನ್ ಅಧಿಕಾರದಿಂದ ಕೆಳಗಿಳಿದ ಏಳು ತಿಂಗಳ ನಂತರ ಈ ಘಟನೆ ನಡೆದಿದೆ. ಅಧಿಕಾರದಿಂದ ಕೆಳಗಿಳಿದಂದಿನಿಂದ ಅವರು ಸೈನ್ಯ ಮತ್ತು ಗುಪ್ತಚರ ಸಂಸ್ಥೆ ISI ಯ "ಹಸ್ತಕ್ಷೇಪ" ದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. "ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆʼ ಎಂದು ಸೇನೆ ಹಾಗೂ ಐಎಸ್‌ಐ ವಿರುದ್ಧ ಖಾನ್‌ ಆರೋಪಿಸುತ್ತಲೇ ಬಂದಿದ್ದಾರೆ.

ಪಾಕ್‌ ಪ್ರಧಾನಿ ಶೆಹಬಾಝ್ ಷರೀಫ್ ಗುಂಡಿನ ದಾಳಿಯನ್ನು ಖಂಡಿಸಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ತಕ್ಷಣದ ವರದಿಯನ್ನು ಕೇಳುವಂತೆ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರಿಗೆ ಸೂಚಿಸಿದ್ದಾರೆ.

Similar News