ಅರ್ಧದಷ್ಟು ಉದ್ಯೋಗಿಗಳನ್ನು ಕೈಬಿಡುವ ಟ್ವಿಟರ್‌ ಕಂಪೆನಿ ನಿರ್ಧಾರ ವಿರೋಧಿಸಿ ಕೋರ್ಟ್ ಮೊರೆ

Update: 2022-11-04 10:44 GMT

ಸ್ಯಾನ್‌ ಫ್ರಾನ್ಸಿಸ್ಕೋ: ಎಲಾನ್‌ ಮಸ್ಕ್‌ (Elon Musk) ಅವರು ಟ್ವಿಟ್ಟರ್‌ನ (Twitter) ನೂತನ ಬಾಸ್‌ ಆಗುತ್ತಿದ್ದಂತೆಯೇ ಕಂಪೆನಿಯ ಅರ್ಧದಷ್ಟು, ಅಂದರೆ ಸುಮಾರು 3,700  ಉದ್ಯೋಗಿಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿರುವುದನ್ನು ವಿರೋಧಿಸಿ ಅಟಾರ್ನಿ ಶೆನ್ನೊನ್‌ ಲಿಸ್ಸ್-ರಿಯೋರ್ಡನ್‌ ಅವರು ಸ್ಯಾನ್‌ ಫ್ರಾನ್ಸಿಸ್ಕೋ ಫೆಡರಲ್‌ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಸಾಕಷ್ಟು ಮುಂಚಿತವಾಗಿ ನೋಟಿಸ್‌ ನೀಡದೆ ಉದ್ಯೋಗಿಗಳನ್ನು ಕೈಬಿಡಲಾಗುತ್ತಿರುವುದು ವರ್ಕರ್‌ ಅಡ್ಜಸ್ಟ್‌ಮೆಂಟ್‌ ಎಂಡ್‌ ರಿಟ್ರೈನಿಂಗ್‌ ನೋಟಿಫಿಕೇಶನ್‌ ಕಾಯಿದೆಯ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಕಾಯಿದೆಯ ನಿಬಂಧನೆಗಳನ್ನು ಅನುಸರಿಸುವಂತೆ ಟ್ವಿಟರ್‌ಗೆ ಸೂಚಿಸಬೇಕು ಹಾಗೂ ಉದ್ಯೋಗದಿಂದ ಕೈಬಿಡುತ್ತಿರುವುದರ ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತುವ  ಹಕ್ಕನ್ನು ಕೈಬಿಡಬೇಕೆಂದು ಲಿಖಿತ ದಾಖಲೆಗಳಿಗೆ ಟ್ವಿಟರ್‌ ಸಹಿ ಪಡೆಯುವುದನ್ನು ನಿರ್ಬಂಧಿಸಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.

ಉದ್ಯೋಗ ಕಳೆದುಕೊಂಡಿರುವ ಹಲವು ಟ್ವಿಟರ್‌ ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕ ಹೊರಹಾಕಿದ್ದಾರೆ. #Lovewhereyouworked ಹ್ಯಾಶ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ ಆಗುತ್ತಿದೆ.

ಇತ್ತೀಚಿನ ಬೆಳವಣಿಗೆ ಕುರಿತಂತೆ ಟ್ವಿಟರ್‌ ಆಡಳಿತ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಕೇರಳ: ಕಾರಿಗೆ ಒರಗಿ ನಿಂತಿದ್ದ ಬಾಲಕನ ಎದೆಗೆ ಕಾಲಿನಿಂದ ಒದ್ದ ಚಾಲಕನ ಬಂಧನ

Similar News