ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಆರಂಭಿಸಿದ ಮಸ್ಕ್: ಟ್ವಿಟರ್‌ಗೆ ಪ್ರವೇಶ ಲಭ್ಯವಾಗದೆ ಬಳಕೆದಾರರ ಪರದಾಟ

Update: 2022-11-04 15:07 GMT

ಹೊಸದಿಲ್ಲಿ: ಶುಕ್ರವಾರ ಬೆಳಿಗ್ಗೆಯಿಂದ ಟ್ವಿಟರ್ (Twitter) ವೆಬ್ ಅಪ್ಲಿಕೇಷನ್ ಮತ್ತು ವೆಬ್ ಪೇಜ್ ತೆರೆದುಕೊಳ್ಳುತ್ತಿಲ್ಲ ಎಂದು ಹಲವಾರು ಬಳಕೆದಾರರು ದೂರಿದ್ದಾರೆ.

ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಹೇಳಿದ್ದಾರೆ. ಫೀಡ್ ಪೇಜ್ ಲೋಡ್ ಆದ ತಕ್ಷಣ ‘ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ-ಮತ್ತೆ ಪ್ರಯತ್ನಿಸಿ’ ಎಂಬ ಪಾಪ್-ಅಪ್ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ವರದಿಯಾಗಿದೆ.

ನಸುಕಿನ ಮೂರು ಗಂಟೆಯ ಸುಮಾರಿಗೆ ಟ್ವಿಟರ್ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಳಗಿನ ಏಳು ಗಂಟೆಯ ಸುಮಾರಿಗೆ ತೀವ್ರ ಉಲ್ಬಣಗೊಂಡಿತ್ತು.

ಈ ನಡುವೆ ಟ್ವಿಟರ್ ಇತರ ಕಾರಣಗಳಿಂದಾಗಿಯೂ ಸುದ್ದಿಯಲ್ಲಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಕಳೆದ ವಾರ ಟ್ವಿಟರ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಉನ್ನತ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದರು.

ಮಸ್ಕ್ ಶುಕ್ರವಾರ ಟ್ವಿಟರ್ ಉದ್ಯೋಗಿಗಳ ಸಾಮೂಹಿಕ ವಜಾ ಆರಂಭಿಸಿದ್ದಾರೆ. ವಜಾ ಆರಂಭಗೊಳ್ಳುತ್ತಿದೆ ಎಂದು ಟ್ವಿಟರ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಲಾಗಿದೆ.

ಇದನ್ನೂ ಓದಿ: ಅರ್ಧದಷ್ಟು ಉದ್ಯೋಗಿಗಳನ್ನು ಕೈಬಿಡುವ ಟ್ವಿಟರ್‌ ಕಂಪೆನಿ ನಿರ್ಧಾರ ವಿರೋಧಿಸಿ ಕೋರ್ಟ್ ಮೊರೆ

Similar News