ಚಲೋ ಕಾರ್ಡ್ ಬಸ್‌ಪಾಸ್ ನಲ್ಲಿ ಶೇ. 60 ರಿಯಾಯಿತಿ
Update: 2022-11-04 19:38 IST
ಉಡುಪಿ : ನಗರದ ಬಸ್ ಪ್ರಯಾಣಿಕರಿಗೆ ಬಸ್ ಆಪರೇಟರ್ಸ್ ಅಸೋಸಿಯೇಶನ್ ವತಿಯಿಂದ ಹಬ್ಬದ ಕೊಡುಗೆಯಾಗಿ ಚಲೋ ಕಾರ್ಡ್ ಸಹಯೋಗದೊಂದಿಗೆ ಎಲ್ಲ ಹೊಸ ಸೂಪರ್ ಸೇವರ್ ಪಾಸ್‌ಗಳ ಮೇಲೆ ಶೇ.60 ರಿಯಾಯಿತಿ ನೀಡಲಾಗುತ್ತ್ತಿದೆ ಎಂದು ಸಿಟಿ ಬಸ್ ಮಾಲಕರ ಸಂಘದ ಸದಸ್ಯ ವಾದಿರಾಜ ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲೋ ಕಾರ್ಡ್‌ನಲ್ಲಿ ವಿದ್ಯಾರ್ಥಿಗಳ ಪಾಸ್‌ಗಳಿಗೂ ಹಲವು ರಿಯಾಯಿತಿ ನೀಡಲಾಗುತ್ತಿದೆ. ನಗರದಲ್ಲಿ 63 ಬಸ್‌ಗಳು ಸಂಚರಿಸುತ್ತಿದ್ದು, 15 ಸಾವಿರ ಪ್ರಯಾಣಿಕರು ಚಲೋ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಸಿಟಿಬಸ್ ನಿರ್ವಾಹಕ ರಿಂದ, ಚಲೋ ಸೆಂಟರ್‌ನಲ್ಲಿ ಕಾರ್ಡ್ ಪಡೆದುಕೊಳ್ಳಬಹುದು. ಬಸ್‌ಗಳು, ಪಾಸ್‌ಗಳು ಕುರಿತ ದೂರು, ಮಾಹಿತಿಗಾಗಿ ಬಸ್ ಮಾಲಕರ ಸಂಘವನ್ನು 8722587054ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಲೋ ಮೊಬಿಲಿಟಿ ಸಂಸ್ಥೆೆಯ ವ್ಯವಸ್ಥಾಾಪಕ ಮಂಜು ನಾಥ್ ಉಪಸ್ಥಿತರಿದ್ದರು.