ಭಾರತ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಹಾಡು: ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ

Update: 2022-11-05 15:07 GMT

ಬೆಂಗಳೂರು,ನ.5: ನಗರದ ಎಂಆರ್ಟಿ ಮ್ಯೂಸಿಕ್ ಸಂಸ್ಥೆ(MRT Music Institute)ಯು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ರಾಹುಲ್ ಗಾಂಧಿ(Rahul Gandhi), ಸುಪ್ರಿಯಾ ಶ್ರೀನಾತೆ(Supriya Srinathe) ಮತ್ತು ಜೈರಾಂ ರಮೇಶ್ (Jairam Ramesh)ಅವರ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯನ್ನು ದಾಖಲಿಸಿದೆ.

‌ರಾಹುಲ್ ರನ್ನು ಮುಖ್ಯವಾಗಿ ಇಟ್ಟುಕೊಂಡು ಭಾರತ ಜೋಡೋ ಯಾತ್ರೆಗಾಗಿ ಮಾರ್ಕೆಟಿಂಗ್ ವೀಡಿಯೊಗಳನ್ನು ತಯಾರಿಸಲು ಕಾಂಗ್ರೆಸ್ ಪಕ್ಷವು ತನ್ನ ಉತ್ಪನ್ನವಾದ ಕೆಜಿಎಫ್-2ರ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಿರುವ ಎಂಆರ್ಟಿ ಮ್ಯೂಸಿಕ್,ಹಿಂದಿಯಲ್ಲಿ ಕೆಜಿಎಫ್-2 ಹಾಡುಗಳ ಹಕ್ಕುಗಳನ್ನು ಪಡೆಯಲು ತಾನು ಅಪಾರ ಹಣವನ್ನು ವ್ಯಯಿಸಿದ್ದೇನೆ ಎಂದು ಪ್ರತಿಪಾದಿಸಿದೆ.

Similar News