ಅಣ್ವಸ್ತ್ರ ದಾಳಿಯ ಬಗ್ಗೆ ಪುಟಿನ್ ಪರೋಕ್ಷ ಉಲ್ಲೇಖ

Update: 2022-11-06 17:34 GMT

ಪ್ಯಾರಿಸ್, ನ.6: ಯುದ್ಧದಲ್ಲಿ ಗೆಲ್ಲಬೇಕಿದ್ದರೆ ಆ ದೇಶದ ಎಲ್ಲಾ ಪ್ರಮುಖ ನಗರಗಳನ್ನು ಕೈವಶ ಮಾಡಿಕೊಳ್ಳಬೇಕು ಎಂದೇನಿಲ್ಲ. ಎರಡನೇ ವಿಶ್ವ ಯುದ್ಧದಲ್ಲಿ ಎರಡು ನಗರಗಳ ಮೇಲೆ ಬಾಂಬ್ ದಾಳಿಯಾದೊಡನೆ ಜಪಾನ್ ಶರಣಾಗಿರುವುದು ಇದಕ್ಕೆ ಉತ್ತಮ ನಿದರ್ಶನ’ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿರುವುದಾಗಿ ವರದಿಯಾಗಿದೆ.

 ತನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪುಟಿನ್, ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲಿನ ಬಾಂಬ್ ದಾಳಿಯ ವಿಷಯವನ್ನು ಪ್ರಸ್ತಾವಿಸಿದರು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಹೇಳಿರುವುದು ಪಾಶ್ಚಿಮಾತ್ಯ ಮುಖಂಡರಲ್ಲಿ ಪರಮಾಣು ದಾಳಿಯ ಆತಂಕವನ್ನು ಮೂಡಿಸಿದೆ ಎಂದು ‘ಡೈಲಿ ಮೈಲಿ’ ವರದಿ ಮಾಡಿದೆ.ಗೆಲುವಿಗಾಗಿ ನೀವು ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವ ಅಗತ್ಯವಿಲ್ಲ ಎಂಬುದನ್ನು ಜಪಾನ್‌ನ ಶರಣಾಗತಿ ಮತ್ತು ಎರಡನೆಯ ಮಹಾಯುದ್ಧದ ಅಂತ್ಯಕ್ಕೆ ಕಾರಣವಾದ ಬಾಂಬ್ ದಾಳಿ ತೋರಿಸಿಕೊಟ್ಟಿದೆ’ ಎಂಬ ಅಭಿಪ್ರಾಯವನ್ನು ಪುಟಿನ್ ವ್ಯಕ್ತಪಡಿಸಿದರು ಎಂದು ಫ್ರಾನ್ಸ್ ಅಧ್ಯಕ್ಷ ಮಾಕ್ರನ್‌ರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಉಕ್ರೇನ್‌ನಲ್ಲಿನ ಯುದ್ಧಕ್ಕೆ ನಿರ್ಣಾಯಕ ಅಂತ್ಯ ತರಲು ಕಾರ್ಯತಂತ್ರದ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸಲು ಪುಟಿನ್ ಅವರ ಸಂಭವನೀಯ ನಿರ್ಧಾರದ ಬಗ್ಗೆ ಪಾಶ್ಚಿಮಾತ್ಯ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.ಈ ವರ್ಷದ ಫೆಬ್ರವರಿಯಲ್ಲಿ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ವಿಶ್ವದಾದ್ಯಂತ ಪರಮಾಣು ಯುದ್ಧದ ಭೀತಿ ಆವರಿಸಿ..

Similar News