×
Ad

ತಾಂಝಾನಿಯಾ: ಪ್ರಯಾಣಿಕರ ವಿಮಾನ ಕೆರೆಗೆ ಪತನ; ಮೃತರ ಸಂಖ್ಯೆ 19ಕ್ಕೆ ಏರಿಕೆ

Update: 2022-11-06 23:17 IST

ತಾಂಝಾನಿಯಾ: ಪ್ರಯಾಣಿಕರ ವಿಮಾನ ಕೆರೆಗೆ ಪತನ; ಮೃತರ ಸಂಖ್ಯೆ 19ಕ್ಕೆ ಏರಿಕೆ ತಾಂಝಾನಿಯಾ: ಪ್ರಯಾಣಿಕರ ವಿಮಾನ ಕೆರೆಗೆ ಪತನ; ಮೃತರ ಸಂಖ್ಯೆ 19ಕ್ಕೆ ಏರಿಕೆ 
ದೊಡೊಮ, ನ.6: ತಾಂಝಾನಿಯಾದಲ್ಲಿ 49 ಪ್ರಯಾಣಿಕರಿದ್ದ ಸಣ್ಣ ಪ್ರಯಾಣಿಕ ವಿಮಾನವೊಂದು ರವಿವಾರ ವಿಕ್ಟೊರಿಯಾ ಕೆರೆಗೆ ಪತನಗೊಂಡಿದ್ದು 19 ಮಂದಿ ಮೃತಪಟ್ಟಿದ್ದಾರೆ ಎಂದು ತಾಂಝಾನಿಯಾ ಏರ್ಲೈನ್ಸ್ ಸಂಸ್ಥೆ ಹೇಳಿದೆ.ರವಿವಾರ ಬೆಳಿಗ್ಗೆ ತಾಂಝಾನಿಯಾದ ಬುಕೋಬಾ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆಯೇ ವಿಮಾನ ಕೆರೆಗೆ ಉರುಳಿದೆ. ಕೆಟ್ಟ ಹವಾಮಾನ ಮತ್ತು ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ . ವಿಮಾನವು ದಾರ್ಎಸ್ ಸಲಾಮ್ ನಗರದಿಂದ ಪ್ರಯಾಣ ಆರಂಭಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.ವಿಮಾನವು 328 ಅಡಿ ಎತ್ತರದಲ್ಲಿದ್ದಾಗ ಸಮಸ್ಯೆ ಎದುರಾಗಿದೆ. ಜತೆಗೆ ಮಳೆ ಹಾಗೂ ಮೋಡದ ಕಾರಣ ಪೈಲಟ್ಗೆ ಸಮಸ್ಯೆ ಎದುರಾಗಿರಬಹುದು. ತಕ್ಷಣ ಬೋಟ್ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು ಕೆರೆಗೆ ಬಿದ್ದಿರುವ ವಿಮಾನದಲ್ಲಿದ್ದ 23 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕಗೆರಾ ಪ್ರಾಂತದ ಪೊಲೀಸ್ ಅಧಿಕಾರಿ ವಿಲಿಯಂ ಮ್ವಾಂಪಘಲೆ ಹೇಳಿದ್ದಾರೆ.

Similar News