ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10 ಶೇಕಡಾ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್

Update: 2022-11-07 06:24 GMT

ಹೊಸದಿಲ್ಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ಕಾಲೇಜುಗಳು ಹಾಗೂ  ಸರಕಾರಿ ಉದ್ಯೋಗಗಳಲ್ಲಿ  10 ಶೇಕಡಾ  ಮೀಸಲಾತಿಯನ್ನು ಸುಪ್ರೀಂಕೋರ್ಟ್ ಸೋಮವಾರ  ಎತ್ತಿ ಹಿಡಿದಿದೆ. ಇದು ತಾರತಮ್ಯದಿಂದ ಕೂಡಿಲ್ಲ, ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಐವರು ನ್ಯಾಯಾಧೀಶರ  ಸಾಂವಿಧಾನಿಕ ಪೀಠದಲ್ಲಿ  ನಾಲ್ವರು ನ್ಯಾಯಾಧೀಶರು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ ಪರ ತೀರ್ಪು ನೀಡಿದ್ದಾರೆ.

50 ರಷ್ಟು ಮಿತಿಯ ಕಾರಣದಿಂದಾಗಿ ಇಡಬ್ಲ್ಯು ಎಸ್ ಕೋಟಾ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಸೋತ ಕೂಡಲೇ ಕೇಂದ್ರ ಸರಕಾರವು 103 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ 

ಇಡಬ್ಲ್ಯುಎಸ್ ಮೀಸಲಾತಿಯನ್ನು 2019 ರ ಸಾರ್ವತ್ರಿಕ ಚುನಾವಣೆಯ ಮೊದಲು ಆರಂಭಿಸಲಾಯಿತು.

ತಕ್ಷಣವೇ ಈ ಮೀಸಲಾತಿಯ ಸಿಂಧುತ್ವದ ಕುರಿತು  40 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಯಿತು. ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ವಿಪಕ್ಷಗಳು ಇದನ್ನು ವಿರೋಧಿಸಿಲ್ಲ.

Similar News