ವಿವಾದಿತ ಬಲಪಂಥೀಯ ನಾಯಕ ಸಂಭಾಜಿ ಭಿಡೆ ಕಾಲಿಗೆ ನಮಸ್ಕರಿಸಿದ ಸುಧಾಮೂರ್ತಿ!

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ

Update: 2022-11-08 15:50 GMT

ಸಾಂಗ್ಲಿ: ಖ್ಯಾತ ಲೇಖಕಿ ಹಾಗೂ ಸಮಾಜ ಸೇವಕಿ ಸುಧಾ ಮೂರ್ತಿ (Sudha Murthy) ಅವರು ವಿವಾದಿತ ಬಲಪಂಥೀಯ ನಾಯಕ ಮತ್ತು ಶಿವ ಪ್ರತಿಷ್ಠಾನದ ಸ್ಥಾಪಕ ಸಂಭಾಜಿ ರಾವ್‌ ಭಿಡೆ (Sambhaji Bhide) ಅವರ ಕಾಲಿಗೆ ನಮಸ್ಕರಿಸಿದ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಭೀಮಾ ಕೋರೆಗಾಂವ್‌ನಲ್ಲಿ 2018 ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕಲ್ಲು ತೂರಾಟಕ್ಕೆ ಪ್ರೇರೇಪಿಸಿದ ಆರೋಪ ಎದುರಿಸುತ್ತಿರುವ ಭಿಡೆ ಇತ್ತೀಚೆಗಷ್ಟೇ ಬಿಂದಿ ಧರಿಸದೇ ಇದ್ದ ಪತ್ರಕರ್ತೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡು ಬಿಂದಿ ಧರಿಸಿ ಪ್ರಶ್ನೆ ಕೇಳಿದರೆ ಮಾತ್ರ ಉತ್ತರಿಸುವುದಾಗಿ ಹೇಳಿ ವಿವಾದಕ್ಕೀಡಾಗಿದ್ದರು.

ಸಾಂಗ್ಲಿಯಲ್ಲಿ ನವೆಂಬರ್‌ 7, ಸೋಮವಾರ ನಡೆದ ಕಾರ್ಯಕ್ರಮದಲ್ಲಿ  ಇನ್ಫೋಸಿಸ್‌ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಬ್ರಿಟನ್‌ ದೇಶದ ನೂತನ ಪ್ರಧಾನಿ ರಿಷಿ ಸುನಾಕ್‌ ಅವರ ಅತ್ತೆಯಾಗಿರುವ ಸುಧಾಮೂರ್ತಿ ಅವರು ಭಿಡೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Similar News