ಟ್ವೆಂಟಿ-20 ವಿಶ್ವಕಪ್: ಫೈನಲ್ ನಲ್ಲಿ ಭಾರತ ಎದುರಾಳಿಯಾಗುವ ಸಾಧ್ಯತೆ ಕುರಿತು ಬಾಬರ್ ಆಝಂ ಪ್ರತಿಕ್ರಿಯಿಸಿದ್ದು ಹೀಗೆ

Update: 2022-11-10 05:58 GMT

ಸಿಡ್ನಿ: ಪಾಕಿಸ್ತಾನ ಕ್ರಿಕೆಟ್ ತಂಡವು ಬುಧವಾರದಂದು ನಡೆದ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಅನ್ನು ಸೋಲಿಸಿ 2022 ರ ಟಿ-20 ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಭಾರತ-ಇಂಗ್ಲೆಂಡ್ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಫೈನಲ್ ನಲ್ಲಿ ಸೆಣಸಾಡುವ  ಸಾಧ್ಯತೆ ಬಗ್ಗೆ ಭಾರಿ ನಿರೀಕ್ಷೆ ಇದೆ.

ಸೆಮಿಫೈನಲ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್ ಆಝಮ್, ಮುಂಬರುವ ಭಾರತದ ವಿರುದ್ಧ ಸಂಭವನೀಯ 'ಒತ್ತಡ' ಪಂದ್ಯ ಹಾಗೂ  ರೋಹಿತ್ ಶರ್ಮಾ ಬಳಗವನ್ನು ನಿಭಾಯಿಸುವ ತಂಡದ ತಂತ್ರದ ಬಗ್ಗೆ ಕೇಳಲಾಯಿತು.

ನೀವು ಉತ್ತಮ ಪುನರಾಗಮನವನ್ನು ಮಾಡಿದ್ದೀರಿ. ಫೈನಲ್‌ನಲ್ಲಿ ಭಾರತವು ತಮ್ಮ ಎದುರಾಳಿಯಾಗಬಲ್ಲದು ಎಂಬ ನಿರೀಕ್ಷೆಯಲ್ಲಿದ್ದೀರಿ. ಅಂತಹ ಪಂದ್ಯಗಳಲ್ಲಿ, ನೀವು ಆಗಾಗ್ಗೆ ಒತ್ತಡಕ್ಕೆ ಒಳಗಾಗುತ್ತೀರಿ. ಅಂತಹ ಪರಿಸ್ಥಿತಿಗೆ ನಿಮ್ಮ ತಂತ್ರವೇನು? ಎಂದು ಪತ್ರಕರ್ತರೊಬ್ಬರು ಬಾಬರ್ ಗೆ ಪ್ರಶ್ನಿಸಿದರು.

"ನಾವು ಅಂತಿಮವಾಗಿ ಯಾವ ಎದುರಾಳಿಯನ್ನು ಎದುರಿಸುತ್ತೇವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಯಾವುದೇ ಎದುರಾಳಿ ಬಂದರೂ ನಾವು ನಮ್ಮ 100 ಶೇ. ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ನಾವು ಯಾವಾಗಲೂ ಸವಾಲುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಹಾಗೂ  ಕೊನೆಯಲ್ಲಿ ಅದು ಒತ್ತಡವನ್ನು ಉಂಟು ಮಾಡುತ್ತದೆ. ಪಂದ್ಯಾವಳಿಯಲ್ಲಿ ವಿವಿಧ ಹಂತಗಳನ್ನು ದಾಟಿದ ನಂತರ ನೀವು ಫೈನಲ್ ಪ್ರವೇಶಿಸುತ್ತೀರಿ. ನೀವು ಫೈನಲ್ ತಲುಪಿದಾಗ, ನೀವು ನಿರ್ಭೀತಿ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೀರಿ. ಕಳೆದ 3-4 ಪಂದ್ಯಗಳಲ್ಲಿ ನಾವು ಯಾವ ರೀತಿಯ ಕ್ರಿಕೆಟ್ ಆಡಿದ್ದೇವೆಯೋ  ಅದನ್ನು ಮುಂದುವರಿಸಲು ನಾವು ನೋಡುತ್ತೇವೆ'' ಎಂದರು.

Similar News