ನ.11: ದೇರಳಕಟ್ಟೆಯಲ್ಲಿ ಸೀರತ್ ಸಮಾವೇಶ
Update: 2022-11-10 14:15 IST
ಮಂಗಳೂರು, ನ.10: ಯುನಿವೆಫ್ ಕರ್ನಾಟಕದ 'ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ ಮುಹಮ್ಮದ್(ಸ)' ಎಂಬ ಕೇಂದ್ರೀಯ ವಿಷಯದಲ್ಲಿ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ನ.11ರಂದು ಸಂಜೆ 6:45ಕ್ಕೆ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರುಗಲಿದೆ.
ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ 'ನಮ್ಮ ಜೀವನ ಮತ್ತು ಪ್ರವಾದಿ (ಸ)ರ ಬೋಧನೆಗಳು' ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಅಳೇಕಲ ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಪಿ. ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.