ಹೋರಾಟಗಾರ ಗೌತಮ್ ನವ್ಲಾಖಾರನ್ನು ಜೈಲಿನ ಬದಲಿಗೆ ಗೃಹ ಬಂಧನದಲ್ಲಿರಿಸಲು ಸುಪ್ರೀಂಕೋರ್ಟ್ ಸಮ್ಮತಿ

Update: 2022-11-10 09:33 GMT

ಹೊಸದಿಲ್ಲಿ: ಸಾಮಾಜಿಕ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾ rights activist Gautam Navlakha  ಅವರ ಆರೋಗ್ಯದ ದೃಷ್ಟಿಯಿಂದ ಮುಂಬೈನ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಇರಿಸುವ ಬದಲು ಗೃಹಬಂಧನದಲ್ಲಿ ಇರಿಸಲು ಸುಪ್ರೀಂ ಕೋರ್ಟ್ ಗುರುವಾರ) ಅನುಮತಿ ನೀಡಿದೆ. ಒಂದು ತಿಂಗಳ ನಂತರ, ಈ ಆದೇಶವನ್ನು ಪರಿಶೀಲಿಸಲಾಗುತ್ತದೆ ಎಂದು ಲೈವ್ ಲಾ ವರದಿ ಮಾಡಿದೆ.

ನವ್ಲಾಖಾ ಅವರನ್ನು 48 ಗಂಟೆಗಳ ಒಳಗೆ ಗೃಹಬಂಧನಕ್ಕೆ ಸ್ಥಳಾಂತರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅವರ 71 ವರ್ಷದ ಪತ್ನಿಯನ್ನು ಅವರೊಂದಿಗೆ ಇರಲು ಅನುಮತಿಸಲಾಗುವುದು.

ಗೃಹಬಂಧನದಲ್ಲಿರುವಾಗ ಭದ್ರತೆಯ ವೆಚ್ಚವನ್ನು ಭರಿಸಲು ನವ್ಲಾಖಾ ಅವರಿಗೆ 2.4 ಲಕ್ಷ ರೂಪಾಯಿ ಠೇವಣಿ ಇಡುವಂತೆ ತಿಳಿಸಲಾಗಿದೆ.

ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಗೃಹಬಂಧನಕ್ಕೆ  ಷರತ್ತುಗಳನ್ನು ಕೂಡಾ ವಿಧಿಸಿದರು. ನವ್ಲಾಖಾ ಅವರಿಗೆ ಇಂಟರ್ನೆಟ್, ಕಂಪ್ಯೂಟರ್ ಅಥವಾ ಇತರ ಯಾವುದೇ ಸಂವಹನ ಸಾಧನವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಆದಾಗ್ಯೂ, , ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಒದಗಿಸಿದ ಮೊಬೈಲ್ ಫೋನ್ ಅನ್ನು ದಿನಕ್ಕೆ ಒಮ್ಮೆ 10 ನಿಮಿಷಗಳ ಕಾಲ ಪೊಲೀಸರ ಸಮ್ಮುಖದಲ್ಲಿ ಬಳಸಲು ಅವರಿಗೆ ಅನುಮತಿ ನೀಡಲಾಗುತ್ತದೆ. ಅವರ ಸಹಚರ ಸೇರಿದಂತೆ ಯಾರಿಂದರೂ  ಮೊಬೈಲ್ ಫೋನ್ ಅನ್ನು ಬಳಸಬಾರದು”ಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

Similar News