×
Ad

ಅನಧಿಕೃತ ನಿರ್ಮಾಣ ಆರೋಪ: ಅಫ್ಝಲ್‌ ಖಾನ್‌ ಸಮಾಧಿಯ ಸುತ್ತಲಿನ ಕಟ್ಟಡವನ್ನು ಕೆಡವಿದ ಮಹಾರಾಷ್ಟ್ರ ಸರ್ಕಾರ

Update: 2022-11-10 20:21 IST

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲಾಡಳಿತವು ಬಿಜಾಪುರದ ಆದಿಲ್ ಶಾಹಿ ರಾಜವಂಶದ ಜನರಲ್ 1659 ರಲ್ಲಿ ಮರಾಠಾ ದೊರೆ ಶಿವಾಜಿಯಿಂದ ಪ್ರತಾಪಗಢ ಅವರ ಸಮಾಧಿಯ ಸುತ್ತಲಿನ ಕಟ್ಟಡಗಳನ್ನು ಅನಧಿಕೃತ ಎಂದು ಗುರುವಾರ ಕೆಡವಲು ಪ್ರಾರಂಭಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

1659 ರಲ್ಲಿ ಮರಾಠಾ ದೊರೆ ಶಿವಾಜಿಯಿಂದ ಪ್ರತಾಪಗಢ ಕೋಟೆಯ ಬಳಿ ಕೊಲ್ಲಲ್ಪಟ್ಟ ಅಫ್ಝಲ್‌ ಖಾನ್ ರಿಗೆ ನಂತರ ಸಮಾಧಿಯನ್ನು ನಿರ್ಮಿಸಲಾಗಿತ್ತು. ಮಹಾರಾಷ್ಟ್ರದ ಕೆಲವು ಸಂಘಟನೆಗಳು "ಶಿವ ಪ್ರತಾಪ್ ದಿನ್" ಎಂದು 363 ನೇ ವಾರ್ಷಿಕೋತ್ಸವ ಆಚರಿಸಿದ ದಿನದಂದೇ ಸತಾರಾ ಆಡಳಿತವು ಈ ಕ್ರಮ ಕೈಗೊಂಡಿರುವುದು ಗಮನಾರ್ಹ.

ಭಾರೀ ಪೊಲೀಸ್ ಭದ್ರತೆಯ ನಡುವೆ ಗುರುವಾರ ಮುಂಜಾನೆ ಧ್ವಂಸ ಕಾರ್ಯ ಆರಂಭಗೊಂಡಿದ್ದು, ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

"ನಾವು ಅಫ್ಜಲ್ ಖಾನ್ ಸಮಾಧಿ ಆವರಣದ ಸುತ್ತಲೂ ನಿರ್ಮಿಸಲಾದ ಶಾಶ್ವತ ಕೊಠಡಿಗಳಂತಹ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಿದ್ದೇವೆ" ಎಂದು ಸತಾರಾ ಕಲೆಕ್ಟರ್ ರುಚೇಶ್ ಜೈವಂಶಿ ಹೇಳಿದ್ದಾರೆ. ಹೈಕೋರ್ಟ್‌ನ ಆದೇಶ ಮತ್ತು ರಾಜ್ಯ ಸರ್ಕಾರ ನೀಡಿರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಚನೆಗಳು 15 ರಿಂದ 20 ಗುಂಟೆಗಳ ಭೂಮಿಯಲ್ಲಿ ಹರಡಿಕೊಂಡಿವೆ ಎಂದು ಜೈವಂಶಿ ಹೇಳಿದರು (ಒಂದು ಗುಂಟೆ ಎಂದರೆ 1,089 ಚದರ ಅಡಿಗಳು). ಈ ಜಮೀನಿನ ಕೆಲವು ಭಾಗ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ್ದು ಎಂದು ಅವರು ಹೇಳೀದ್ದಾರೆ.

ಮರಾಠ ರಾಜನಿಂದ ಖಾನ್ ಕೊಲ್ಲಲ್ಪಟ್ಟ ದಿನದಂದೇ ಧ್ವಂಸಗೊಳಿಸಿರುವುದು ಪ್ರತಿಯೊಬ್ಬರಿಗೂ ಹೆಮ್ಮೆ ತರುವ ವಿಚಾರ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

"2007 ರಲ್ಲಿ, ನ್ಯಾಯಾಲಯವು ಅತಿಕ್ರಮಣವನ್ನು ತೆಗೆದುಹಾಕಲು ಆದೇಶಿಸಿತ್ತು. 2017 ರಲ್ಲಿ, ನಾವು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಆದರೆ ಕೆಲವು ಕಾನೂನು ಸಮಸ್ಯೆಗಳು ಬಂದವು. ಅತಿಕ್ರಮಣಗಳನ್ನು ತೆಗೆದುಹಾಕಲು ಶಿವಾಜಿಯ ಅನುಯಾಯಿಗಳ ಬೇಡಿಕೆಗಳು ಇದ್ದವು ಆದರೆ ಅವರು ಪ್ರತಿಭಟನೆಗಳನ್ನು ನಡೆಸಿದಾಗ, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು‌, ಬಳಿಕ ಅತಿಕ್ರಮಣ ನಿರ್ಮಾಣವನ್ನು ಎಂದಿಗೂ ತೆಗೆದುಹಾಕಲಿಲ್ಲ. ಇಂದು ಎಲ್ಲರಿಗೂ ತೃಪ್ತಿ ತಂದುಕೊಟ್ಟಿದೆ...” ಎಂದು ಫಡ್ನವೀಸ್‌ ಹೇಳಿದ್ದಾರೆ.

Similar News