ವಾಯುಮಾಲಿನ್ಯದಿಂದ ಪ್ರತೀ ವರ್ಷ 5.7 ದಶಲಕ್ಷ ಜನರ ಮೃತ್ಯು: ವರದಿ

Update: 2022-11-10 16:16 GMT

ಟೊರಂಟೊ, ನ.11: ಸೂಕ್ಷ್ಮ ಮಾಲಿನ್ಯ ಕಣ(ಪಿಎಂ 2.5) ವಾಯುಮಾಲಿನ್ಯದಿಂದ ಪ್ರತೀ ವರ್ಷ ವಿಶ್ವದಾದ್ಯಂತ   ಸುಮಾರು 5.7 ದಶಲಕ್ಷ ಜನರು ಅಕಾಲಿಕ ಮರಣ ಹೊಂದುತ್ತಾರೆ . ಕಡಿಮೆ ಮಟ್ಟದ ವಾಯುಮಾಲಿನ್ಯವು ಈ ಹಿಂದೆ ಭಾವಿಸಿದ್ದಕ್ಕಿಂತಲೂ ಅಪಾಯಕಾರಿ ಎಂದು ಹೊಸ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊರಾಂಗಣ ಸೂಕ್ಷ್ಮಕಣಗಳ ವಾಯುಮಾಲಿನ್ಯ(ಪಿಎಂ 2.5)ದಿಂದ ಪ್ರತೀ ವರ್ಷ 4.2 ದಶಲಕ್ಷ ಜನತೆ ಅಕಾಲಿಕ ಮರಣಹೊಂದುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಅಂದಾಜಿಸಲಾಗಿತ್ತು. ಆದರೆ, `ಸೈಯನ್ಸ್ ಅಡ್ವಾನ್ಸಸ್' ಪತ್ರಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಪಿಎಂ 2.5 ವಾಯು ಮಾಲಿನ್ಯದಿಂದ ಪ್ರತೀ ವರ್ಷ 1.5 ದಶಲಕ್ಷ ಹೆಚ್ಚುವರಿ ಸಾವು ಸಂಭವಿಸುತ್ತದೆ. 

ಈ ಹಿಂದೆ ಅತ್ಯಂತ ಕಡಿಮೆ ಮಟ್ಟದ ಹೊರಾಂಗಣ ವಾಯುಮಾಲಿನ್ಯವನ್ನು ಸಂಭಾವ್ಯ ಮಾರಣಾಂತಿಕ ಎಂದು ಪರಿಗಣಿಸಿರಲಿಲ್ಲ. ಆದರೆ ಈ ಸೂಕ್ಷ್ಮಕಣಗಳು ಹೃದಯ ರಕ್ತನಾಳದ ಮತ್ತು ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಕೆನಡಾದ ಮೆಕ್ಗಿಲ್ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸಂಶೋಧನಾ ತಂಡದ ಮುಖ್ಯಸ್ಥ ಸ್ಕಾಟ್  ವೀಚೆಂಥಲ್ (Scott Weichenthal)ಹೇಳಿದ್ದಾರೆ. 

Similar News