ಪಾಕ್‌ಗೆ ಮರಳಲಿರುವ ಮಾಜಿ ಪ್ರಧಾನಿ ನವಾಝ್ ಶರೀಫ್

Update: 2022-11-12 17:30 GMT

ಇಸ್ಲಮಾಬಾದ್, ನ.12: ಪಾಕಿಸ್ತಾನ್  ಮುಸ್ಲಿಂ ಲೀಗ್ ನವಾಝ್(ಪಿಎಂಎಲ್-ಎನ್) ಮುಖಂಡ ನವಾಝ್ ಶರೀಫ್(Nawaz Sharif) ಲಂಡನ್‌ನಲ್ಲಿನ  ತಮ್ಮ ಸ್ವಯಂ ದೇಶಭ್ರಷ್ಟತೆಯನ್ನು ಕೊನೆಗೊಳಿಸಿ ಪಾಕಿಸ್ತಾನಕ್ಕೆ ಹಿಂತಿರುಗಬಹುದು ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಬಹುದು ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಮೂರು ಬಾರಿ ಪ್ರಧಾನಿಯಾಗಿರುವ 72 ವರ್ಷದ ಶರೀಫ್‌ಗೆ ಪಿಎಂಎನ್-ಎಲ್ ಪಕ್ಷದ ನೇತೃತ್ವವಿರುವ ಸರಕಾರವು ರಾಜತಾಂತ್ರಿಕ ಪಾಸ್‌ಪೋರ್ಟ್ ಒದಗಿಸಿದೆ. ಶರೀಫ್ ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಹಿಂತಿರುಗುವ ನಿರೀಕ್ಷೆಯಿದೆ. ಆದರೆ  ದೇಶದಲ್ಲಿ ಅವಧಿ ಪೂರ್ಣ ಚುನಾವಣೆ ನಡೆಯುತ್ತದೆ ಎಂಬುದು ಇದರರ್ಥವಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಹಾಲಿ ಸಂಸತ್‌ನ ಅವಧಿ 2023ರ ಆಗಸ್ಟ್ಗೆ ಅಂತ್ಯವಾಗಲಿದೆ. 

Similar News