ಸಿಡ್ನಿ: ವಿಹಾರ ನೌಕೆಯಲ್ಲಿದ್ದ 800 ಪ್ರವಾಸಿಗರಲ್ಲಿ ಸೋಂಕು ದೃಢ

Update: 2022-11-12 17:54 GMT

ಸಿಡ್ನಿ, ನ.12: ಸುಮಾರು 800 ಸೋಂಕಿತರಿದ್ದ ವಿಹಾರ ನೌಕೆಯು ಸಿಡ್ನಿ(Sydney) ಬಂದರಿನಲ್ಲಿ ಲಂಗರು ಹಾಕಿದ್ದು , ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಆಸ್ಟ್ರೇಲಿಯಾ(Australia)ದ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಸೋಂಕು ನಿಯಂತ್ರಣಕ್ಕೆ ಈಗ ಚಾಲ್ತಿಯಲ್ಲಿರುವ ಕ್ರಮಗಳು ಸಮರ್ಪಕವಾಗಿವೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ. ಆದರೆ `ಟೈರ್-3' (``Tier-3'')ಮಟ್ಟದ ಅಪಾಯ ಇದಾಗಿದ್ದು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಪ್ರಸರಣಗೊಳ್ಳುವ ಅಪಾಯವಿದೆ ಎಂದು ಇಲಾಖೆಯ ಸಚಿವೆ ಕ್ಲ್ಯಾರಾ  ಒ'ನೀಲ್(Clara O'Neill) ಹೇಳಿದ್ದಾರೆ.

2020ರಲ್ಲಿ ಇದೇ ರೀತಿ ನ್ಯೂ ಸೌತ್‌ವೇಲ್ಸ್ ಬಂದರಿನಲ್ಲಿ ಲಂಗರು ಹಾಕಿದ್ದ ರೂಬಿ ಪ್ರಿನ್ಸೆಸ್ ನೌಕೆಯಲ್ಲಿದ್ದ ಪ್ರವಾಸಿಗರಲ್ಲಿ ಕೊರೋನ ಸೋಂಕಿನ ಪ್ರಕರಣ ದೃಢಪಟ್ಟಿತ್ತು. ಬಳಿಕ ನಗರದಲ್ಲಿ  ಸೋಂಕು ತೀವ್ರಗತಿಯಲ್ಲಿ ಪ್ರಸಾರವಾಗಿ  914 ಮಂದಿ    ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 28 ಮಂದಿ ಸಾವನ್ನಪ್ಪಿದ್ದರು. 

Similar News